Breaking News

ಕರ್ನಾಟಕ

ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಐಟಿ ಶಾಕ್

ಆನೇಕಲ್(ಬೆಂ.ನಗರ ಜಿಲ್ಲೆ): ರಾಮೋಜಿ ಗೌಡ ಅವರಿಗೆ ಸೇರಿದ ಬಿಎಸ್‌ಆರ್‌ ಡೆವಲಪರ್ಸ್ ಹಾಗೂ ಟುಟೋರಿಯಲ್‌ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.ಹೆಚ್‌ಎಸ್‌ಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ ಮೇಲೂ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ಹಿಂದೆ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ರಾಮೋಜಿ ಗೌಡ ಹಿರಿಯ ಕಾಂಗ್ರೆಸ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.

Read More »

ಹೆತ್ತ ಮಗುವಿಗೆ ವಿಷ ಹಾಕಿ ಕೊಂದ ತಾಯಿ ಆತ್ಮಹತ್ಯೆಗೆ ಯತ್ನ-ಕೋಟೆ ನಾಡಲ್ಲೋಂದು ಅಮಾನವೀಯ ಕೃತ್ಯ

ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ …

Read More »

ಗೌರಿ ಲಂಕೇಶ್‌ ಹತ್ಯೆ ಪ್ರಕರಣ-ಇಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೈಕ್ ಕಳ್ಳತನ ಆರೋಪದ ವಿಚಾರಣೆಗಾಗಿ ಪೊಲೀಸರು ಹುಬ್ಬಳ್ಳಿ 1ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್‌ ಬಳಸಲಾಗಿತ್ತು. ಆ ಬೈಕನ್ನು ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಕಳ್ಳತನ ಮಾಡಲಾಗಿತ್ತು. ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ …

Read More »
Featured Video Play Icon

ಧಾರವಾಡದ ಡಿಸಿ ಕಚೇರಿ ಎದುರೇ ಡಿಶುಂ ಡಿಶುಂ…

ಧಾರವಾಡ: ಬಡ್ಡಿ ಹಣಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು. ಜಿಲ್ಲಾಧಿಕಾರಿ ಬಳಿ ಬಂದ ಏಳೆಂಟು ಜನ ಹಣದ ವ್ಯವಹಾರಕ್ಕಾಗಿ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸ್ ಪೇದೆಯೊಬ್ಬರು ಬಂದು ಇಲ್ಲಿಂದ ಆಕಡೆ ಹೋಗಿ ಇದು ಡಿಸಿ ಕಚೇರಿ ಎಂದು ಹೇಳಿದರೂ ಕೇಳದ ಆ ಗುಂಪು ಅಲ್ಲೇ ವಾಗ್ವಾದ ನಡೆಸಿತು. ನಂತರ ಮಾತಿಗೆ ಮಾತು ಬೆಳೆದು ಎರಡೂ …

Read More »

ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಡಿಸಿ ಮಂಜುನಾಥ್ ಭೇಟಿ, ಪರಿಶೀಲನೆ

ಆನೇಕಲ್ : ನಗರದ ಚಂದಾಪುರ ಮುಖ್ಯರಸ್ತೆಯ ಮರಸೂರು ಗೇಟ್ ಬಳಿಯ ಇರುವ ಸ್ಪೂರ್ತಿ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಸ್ಪೂರ್ತಿ ಕಾಲೇಜಿನ ಒಟ್ಟು 168 ಮಕ್ಕಳು ಹಾಸ್ಟೆಲ್​ನಲ್ಲಿದ್ದಾರೆ. ಮೂರು ಮಂದಿಯಲ್ಲಿ ಪಾಸಿಟಿವ್​​ ಕಂಡು ಬಂದ ಹಿನ್ನೆಲೆ, 52 ಮಂದಿಗೆ ತಪಾಸಣೆ ನಡೆಸಿದಾದ 12 ಮಂದಿಗೆ ಸೋಂಕು ತಗುಲಿರುವುದು …

Read More »

IND vs NZ first test: ಕಿವೀಸ್ 296ಕ್ಕೆ ಆಲೌಟ್, 2ನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

ಕಾನ್ಪುರ: ಅಕ್ಷರ್ ಪಟೇಲ್​ ಮಾರಕ ಬೌಲಿಂಗ್ ದಾಳಿಗೆ ಬೆದರಿದ ನ್ಯೂಜಿಲ್ಯಾಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ಗಳಿಗೆ ಸರ್ವಪತನಗೊಂಡಿದೆ. ಈ ಮೂಲಕ ಭಾರತ 49 ರನ್​ಗಳಿಂದ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಆದರೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ ಒಂದು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ. ಎರಡನೇ ದಿನ ವಿಕೆಟ್​ ನಷ್ಟವಿಲ್ಲದೆ 129 ರನ್​ಗಳಿಸಿದ್ದ ಕಿವೀಸ್ ಆರಂಭಿಕ ಜೋಡಿಯನ್ನು ಅಶ್ವಿನ್​ ಬ್ರೇಕ್​ ಮಾಡಿದರು. ಅವರು 214 …

Read More »

ಸ್ವಾಮಿನಾಥನ್ ವರದಿ ಜಾರಿಗೆ ಪಟ್ಟು ಹಿಡಿದ ಅನ್ನದಾತ-ರಾಷ್ಟ್ರೀಯ ಹೆದ್ದಾರಿ ತಡೆದ ರೈತ ಮುಖಂಡರು

ಹುಬ್ಬಳ್ಳಿ: ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳಸಾ ಬಂಡೂರಿ ಹಾಗೂ ವಿವಿಧ ರೈತ ಪರ ಸಂಘಟನೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ ರೈತ ಮುಖಂಡರು ಹುಬ್ಬಳ್ಳಿಯ ಗಬ್ಬೂರು ಟೋಲ್ ಬಳಿ ಹೆದ್ದಾರಿ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ವಾಮಿನಾಥನ್ ಆಯೋಗದ …

Read More »

ಅತಿಕ್ರಮಣ ಅಂಗಡಿಗಳಿಗೆ ಬೀಗಹಾಕಿದ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ

ಅಣ್ಣಿಗೇರಿ : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರುವ ಸರ್ಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಅಂಗಡಿಗಳಿಗೆ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ ಇಂದು ಬೆಳ್ಳಂ ಬೆಳಿಗ್ಗೆ ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತದಿಂದ ಪಾರವಾನಿಗಿ ಪಡೆದಿರುವದು ಒಂದು ಕಡೆಯಾದರೆ, ಕಟ್ಟಡ ನಿರ್ಮಿಸಿರುವದು ಸರ್ಕಾರಿ ಜಾಗದಲ್ಲಿ ಆದ್ದರಿಂದ ಇಂತಹ ಕಟ್ಟಡಗಳಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರುವುಗೊಳಿಸಬೇಕು ಎಂದು ಮಾಲೀಕರಿಗೆ ಬೀಗಿ ಹಾಕಿದರು. …

Read More »

ಚಿಂತಾಮಣಿ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆಯಲ್ಲಿ ಚಿನ್ನ, ಅಪಾರ ಆಸ್ತಿ ದಾಖಲೆ ಪತ್ತೆ

ಚಿಕ್ಕಬಳ್ಳಾಪುರ : ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ ಎಸಿಬಿ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಜಿಲ್ಲೆಯ ಚಿಂತಾಮಣಿಯ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಎಂಬುವರ ಮನೆ ಮೇಲೆ ದಾಳಿ‌ ನಡೆಸಲಾಗಿದೆ. ಇಂದು ಡಿವೈಎಸ್ಪಿ ಸುಧೀರ್​ ,ಇನ್ಸ್‌ಪೆಕ್ಟರ್ ರವಿ ನೇತೃತ್ವದ ತಂಡ ಅಧಿಕಾರಿಯ ಮನೆಗೆ ದಾಳಿ ನಡೆಸಿ ಅನೇಕ ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಈ ವೇಳೆ ಬೆಂಗಳೂರಿನಲ್ಲಿ ಎರಡು‌ ಸೈಟ್​​ನಲ್ಲಿ ‌5 ಮನೆಗಳ ನಿರ್ಮಾಣ, ಚಿಂತಾಮಣಿಯಲ್ಲಿ ಮೂರು ಮನೆ, 4 ಸೈಟ್​​​​ಗಳ ದಾಖಲೆಗಳು, …

Read More »

ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕಾರ್ಯಪಡೆಗೆ ಅಧ್ಯಕ್ಷರಾಗಿ ಡಾ. ಅಶೋಕ್ ಶೆಟ್ಟರ್ ನೇಮಕ

ಹುಬ್ಬಳ್ಳಿ : ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರಕಾರ ರಚಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕಾರ್ಯಪಡೆಗೆ ಕೆ ಎಲ್ ಇ ಸಂಸ್ಥೆಯ ಹುಬ್ಬಳ್ಳಿಯ ಕೆ. ಎಲ್. ಇ. ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಅಶೋಕ್ ಶೆಟ್ಟರ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೆ.ಎಸ್.ಟಿ.ಇ.ಪಿ.ಎಸ್. ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಅಂಗೀಕರಿಸಿದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ …

Read More »