BigTv News
December 19, 2024
Breaking News, ಬೆಳಗಾವಿ
ಬೆಳಗಾವಿ: ಅಲೆಮಾರಿ ಸಮುದಾಯದ ಮೀಸಲಾತಿ ಮತ್ತು ಇತರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ ಅವರು ಹೇಳಿದರು. ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನ ಕಲ್ಪಿಸಿದ ಒಳಮೀಸಲಾತಿಯಲ್ಲಿ ಶೇ.3ರಷ್ಟನ್ನು ಅಲೆಮಾರಿ ಸಮುದಾಯಗಳಿಗೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿ, ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ …
Read More »
BigTv News
December 19, 2024
Breaking News, ಬೆಳಗಾವಿ
ಬೆಳಗಾವಿ: ಹೊಸದಾಗಿ ರಚನೆಯಾದ 65 ತಾಲೂಕುಗಳ ಪೈಕಿ 27 ತಾಲ್ಲೂಕುಗಳಿಗೆ ಸರ್ಕಾರಿ ಕಟ್ಟಡ ಒದಗಿಸಲಾಗಿದೆ. ಉಳಿದ ತಾಲೂಕುಗಳಿಗೆ ಏಪ್ರಿಲ್ ನಂತರ ತಾಲೂಕು ಕಚೇರಿ ‘ಪ್ರಜಾಸೌಧ’ ಕಟ್ಟಡ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲ್ಯಾಣ ಕರ್ನಾಟಕದ ಎಲ್ಲಾ 16 ತಾಲೂಕುಗಳಿಗೆ ಪ್ರಜಾಸೌಧ ನಿರ್ಮಿಸಿ ಕಚೇರಿ ನೀಡಲಾಗಿದೆ. ಜಾಗ ಲಭ್ಯವಿದ್ದ ತಾಲೂಕುಗಳಲ್ಲಿ ಕಟ್ಟಡ …
Read More »
BigTv News
December 19, 2024
Breaking News, ಬೆಳಗಾವಿ
ಬೆಳಗಾವಿ: ಶೀಘ್ರದಲ್ಲೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಿ.ಜಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ , ಬೊಮ್ಮಾಯಿ ಅವರ ಸರ್ಕಾರದ ಬಜೆಟ್ನಲ್ಲಿ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ನಿಗಮಗಳಲ್ಲಿ 28 ಸಾವಿರ ಕೋಟಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಮಾಡಿಸಿ …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ: ಸರ್ವೇ ಹಾಗೂ ಕಂದಾಯ ಇಲಾಖೆಗಳಲ್ಲಿನ ಹಳೆ ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಡಾಟಾಬೇಸ್‌ನಲ್ಲಿ ಸಂರಕ್ಷಿಸುವ ಉದ್ದೇಶದಿಂದ 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕ ಜಾರಿಗೊಳಿಸಿದ್ದ ‘ಭೂ ಸುರಕ್ಷೆ’ ಯೋಜನೆಯನ್ನು ಉಳಿದ 210 ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೂಲ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ಒಳಗಾಗಿ ಉಳಿದ ತಾಲೂಕುಗಳಲ್ಲಿನ …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಪಕ್ಷ ಬಿಜೆಪಿ ನಾಯಕರು ವಕ್ಫ್ ಬೋರ್ಡ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸರ್ಕಾರದ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತರ ನೀಡಲು ಮುಂದಾದಾಗ ಸದನದಲ್ಲಿ ಗದ್ದಲ ಸೃಷ್ಟಿಯಾಯ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮದ್ಯ ಪ್ರವೇಶಿಸಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಕ್ಫ್ ಬೋರ್ಡ್ ನಿಂದ ದೇವಸ್ಥಾನಕ್ಕೆ ನೋಟಿಸ್ ಕೊಟ್ಟಿದ್ದರೆ ಆ ರೀತಿಯ …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ : ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಳ್ಳುವ ಜಮೀನಿನಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಲ್ಲಿ ರೈತರಿಗೂ ಸಹಭಾಗಿತ್ವ ನೀಡಲು ಅಥವಾ ಅವರೇ ಕೈಗಾರಿಕೆ ಸ್ಥಾಪಿಸಲು ಮುಂದಾದರೆ ನೆರವು ನೀಡುವ ಕುರಿತು ಪರಿಶೀಲಿಸುತ್ತೇವೆ ಎಂದು ಕೈಗಾರಿಕೆ ಸಚಿವರಾದ ಎಂಬಿ ಪಾಟೀಲ್ ಹೇಳಿದರು. ಪ್ರಸ್ತುತ ಇರುವ ಕಾಯ್ದೆಯ ಪ್ರಕಾರ ಕೆಐಎಡಿಬಿ ವಶಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲಾಗುತ್ತಿದೆ. ಅವರು ಬಯಸಿದರೆ ಅಭಿವೃದ್ಧಿಗೊಳಿಸಿದ ಅವರ ಪ್ರದೇಶದಲ್ಲಿ ಪ್ರತಿ ಎಕರೆಗೆ ಪರ್ಯಾಯವಾಗಿ 10,781 …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಔದ್ಯೋಗಿಕ ಕ್ರಾಂತಿ ಆಗಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ. ಕಳಸ ಬಂಡೂರಿಗೆ ಮಾಜಿ ಸಿಎಂ ಬೊಮ್ಮಯಿ ಪಾದಯಾತ್ರೆ ನಡೆಸಿದ್ದರು.ಈಗ ಕೇಂದ್ರದಿಂದ NOC ಪಡೆದುಕೊಳ್ಳಬಹುದು. ಈ ಬಗ್ಗೆ ಪ್ರಯತ್ನಪಡಬೇಕು. ಕೇಂದ್ರ ಸರ್ಕಾರದ ನೀತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.ಕೃಷ್ಣ ಮೇಲ್ದoಡೆ ಯೋಜನೆ ಸಂಬಂಧ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಅವಧಿಯಲ್ಲಿ ಯಾವ ಪ್ರಯತ್ನವು …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ: ಭೌಗೋಳಿಕವಾಗಿ ವಿಶಾಲವಾಗಿರುವ ಬೆಳಗಾವಿಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸುವ ಕುರಿತ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಕೇಂದ್ರ ಸರ್ಕಾರ ಕಂದಾಯ ಗಡಿ ಬದಲಿಸದಂತೆ ನೀಡಿರುವ ಆದೇಶದಿಂದಾಗಿ ಸದ್ಯಕ್ಕೆ ಬೆಳಗಾವಿ ವಿಭಜನೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಬೆಳಗಾವಿಯಿಂದ ಚಿಕ್ಕೋಡಿ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕಿದೆ. ಅಲ್ಲದೆ, ಸದ್ಯ …
Read More »
BigTv News
December 18, 2024
Breaking News, ಬೆಳಗಾವಿ
ಬೀದರ್: ಜನವಾಡಾ ಪೊಲೀಸ್ ಠಾಣೆಯ ವ್ಯಾಪ್ತಿಯ ವಿಳಾಸಪುರ್ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಳಾಸಪುರದ ಅವಿನಾಶ್ ಉಪ್ಪಾರ್ ಮತ್ತು ದಿಗಂಬರ್ ಪಾಟೀಲ್ ಬಂಧಿತ ಆರೋಪಿಗಳು. ಮಂಗಳವಾರ ಬೆಳಗ್ಗೆ ಬೀದರ ನಗರದ ನೌಬಾದ್ ಬಸವೇಶ್ವರ್ ವೃತ್ತದ ಹತ್ತಿರ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಿ. 12 ರ ರಾತ್ರಿ ವಿಳಾಸಪುರ್ ಗ್ರಾಮದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ …
Read More »
BigTv News
December 18, 2024
Breaking News, ಬೆಳಗಾವಿ
ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ 2024 ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿತು. ಕಲಾಪದ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರಸ್ತಾವವನ್ನು ಮಂಡಿಸಿದರು. ಇದಕ್ಕೆ ಅನುಮೋದನೆ ದೊರೆತ್ತಿದ್ದು, ಕಾರ್ಮಿಕರ ಕಲ್ಯಾಣಕ್ಕೆ ಅನುಕೂಲವಾಗುವ ಉಪಕ್ರಮವನ್ನು ಈ ಮಸೂದೆ ಒಳಗೊಂಡಿದೆ. ಪ್ರಸ್ತಾವ ಮಂಡಿಸಿದ ನಂತರ ವಿವರ ನೀಡಿದ ಸಚಿವ ಲಾಡ್ ಅವರು, ಈ ತಿದ್ದುಪಡಿಯು ಈಗಾಗಲೇ ಇರುವ ಕಾಯ್ದೆಗೆ …
Read More »