Breaking News

2ನೇ ಬೆಳೆಗೆ ಮಾರ್ಚ್ ಅಂತ್ಯದವರೆಗೆ ತುಂಗಭದ್ರ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ ತಂಗಡಗಿ

ಬೆಂಗಳೂರು: ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.
ವಿಕಾಸಸೌಧಲ್ಲಿ ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್ 15 ರವರೆಗೆ 1500 ಡಿ. 16 ರಿಂದ 31ರವರೆಗೆ 2000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3800 ಕ್ಯೂಸೆಕ್ಸ್ ನಂತೆ, ಫೆ.1ರಿಂದ 28 ರವರಿಗೆ 3800 ಕ್ಯೂಸೆಕ್ಸ್ ಹಾಗೂ ಮಾರ್ಚ್ 1ರಿಂದ 31ರವರೆಗೆ 3800 ಕ್ಯೂ ಸೆಕ್ಸ್ ನಂತೆ ಮತ್ತು ಕುಡಿಯುವ ನೀರಿಗಾಗಿ ಏ. ಒಂದರಿಂದ ಹತ್ತರವರೆಗೆ 1650 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್ 11 ರಿಂದ ಮೇ 10ರವರೆಗೆ 150 ಕ್ಯು ಸೆಕ್ಸ್ ನಂತೆ ವಿತರಣಾ ಕಾಲುವೆ ಒಂದರಿಂದ 11 ಎ ವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 10ರವರೆಗೆ ನೀರು ನಿಲುಗಡೆ, 11ರಿಂದ 31ರವರೆಗೆ 800 ಕ್ಯೂ ಸೆಕ್ಸ್ ನಂತೆ, ಜ.1ರಿಂದ ಹತ್ತರವರೆಗೆ ನೀರು ನಿಲುಗಡೆ ಮತ್ತು 11 ರಿಂದ 31 ರವರೆಗೆ 800 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 15ರವರೆಗೆ 400 ಕ್ಯೂ ಸೆಕ್ಸ್ ನಂತೆ, 16 ರಿಂದ 31ರವರೆಗೆ 600 ಕ್ಯೂ ಸೆಕ್ಸ್ ನಂತೆ, ಜ.1 ರಿಂದ ಫೆ. 28ರವರೆಗೆ 650 ಕ್ಯೂಸೆಕ್ಸ್ ನಂತೆ ಹಾಗೂ ಮಾರ್ಚ್ ಒಂದರಿಂದ 31 ರವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗುವುದು. ಉಳಿದಂತೆ ರಾಯಬಸವಣ್ಣ ಕಾಲುವೆಗೆ ಡಿಸೆಂಬರ್ 10 ರಿಂದ ಜನವರಿ 10ರವರೆಗೆ ನೀರು ನಿಲುಗಡೆ ಮತ್ತು ಜನವರಿ 11 ರಿಂದ ಮೇ 31ರವರೆಗೆ 250 25ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ನೀರು ಹರಿಸಲಾಗುತ್ತದೆ. ಇದರಲ್ಲಿ ಕಾಲುವೆನಿನ ಲಭ್ಯತೆಯು ಇರುವ ತನಕ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಸಚಿವರು ವಿವರಿಸಿದರು.
19ನೇ ಟ್ರಸ್ಟ್ ಗೇಟ್ ಮುರಿದು ಹೋಗಿ ಬಳಿಕ ಎರಡನೇ ಬಾರಿ ಅಣೆಕಟ್ಟು ಭರ್ತಿಯಾಗಿರುವುದು ಇತಿಹಾಸ. ಈ ಹಿಂದೆ ಸಿದ್ದರಾಮಯ್ಯನವರು ಅಣೆಕಟ್ಟೆಗೆ ಭೇಟಿ ನೀಡಿದ ವೇಳೆ ಡ್ಯಾಮ್ ಮತ್ತೆ ತುಂಬಲಿದ್ದು ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮಳೆರಾಯನ ಕೃಪೆಯಿಂದ ಇಂದು ಎರಡನೇ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *