Breaking News

ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ : ಪರಿಶೀಲನೆ ಮಾಡಲು‌ ಸಮಿತಿ‌ರಚನೆ : ಔಷಧಿ ಕಂಪನಿ ಮೇಲೆ ಕಠಿಣ ಕ್ರಮ – ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ : ಬಳ್ಳಾರಿಯಲ್ಲಿ ಬಾಣಂತಿಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಕಳಪೆ ಔಷಧಿ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಬ್ಲಾಕ್ ಲಿಸ್ಟ್ ಗೆ ಹಾಕಲು‌ ಹೇಳಿದ್ದೇನೆ, ಅವರ ವಿಚಾರಣೆ ಮಾಡಲು ಹೇಳಿದ್ದೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಡ್ರಗ್ ಕಂಟ್ರೋಲ್ ರನ್ನಾ ಅವರನ್ನು ಅಮಾನತು ಮಾಡಲಾಗಿದೆ. ಇದರ ಜೊತೆಗೆ ಒಂದು ಕಮಿಟಿ ರಚನೆ ಮಾಡಲಾಗಿದೆ ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಮೋಸ್ಟ್ ಅನ್ಫಾರ್ಚುನೆಟ್. ಔಷಧೀಯ ತಯಾರಿಕೆ ಸಂಸ್ಥೆ ಕಳಪೆ ಔಷಧೀಯ ಕೊಟ್ಟಿರೋದು ಸಾಬೀತು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಾವಿನಪ್ಪಿರುವ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ನಿಡುತ್ತೇವೆ.
ಕಳಪೆ ಗುಣಮಟ್ಟದ ಔಷಧೀಯ ಖರೀದಿಗೆ ನಾನೇನು ಆದೇಶ ಮಾಡಿದ್ದೆನಾ? ಬಿಜೆಪಿಯವರು ಕೋವಿಡ್ ಹಗರಣದಲ್ಲಿ ಕಳಪೆ ಔಷಧಿಯ ಖರೀದಿ ಮಾಡಿದ್ದಾರೆ.
ಅಲ್ಲದೆ ಒಂದಕ್ಕೆ ಹತ್ತು ಪಟ್ಟು ದುಡ್ಡು ಕೊಟ್ಟು, ಟೆಂಡರ್ ಕರೆಯದೆ ಖರೀದಿ ಮಾಡಿದ್ದಾರೆ. ಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಅದಕ್ಕೆ ಹೊಣೆ ಎಂದರು.

ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ,
ಪ್ರಜಾಪ್ರಭುತ್ವದಲ್ಲಿ ಹೋರಾಟ ಎಲ್ಲರೂ ಮಾಡಬಹುದು ಅದಕ್ಕೆ ನನ್ನ ವಿರೋಧ ಇಲ್ಲ.ನಮ್ಮ ಜೊತೆಗೆ ಮಾತನಾಡಿದ್ರೆ ಅದಕ್ಕೆ ಸಮಂಜಸ ಉತ್ತರ ನೀಡುತ್ತೇವೆ ಎಂದರು.

ನಾಳೆಯಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತೆ. ವಿರೋಧ ಪಕ್ಷದವರು ಯಾವೆಲ್ಲ ಚರ್ಚೆ ಮಾಡುತ್ತಾರೋ ನೋಡೋಣ.
ನಮ್ಮ‌ ಸರ್ಕಾರದಲ್ಲಿ ಯಾವುದೇ ಆರ್ಥಿಕ‌ ಸಂಕಷ್ಟ ಇಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿಎಂ‌ ತಿರುಗೇಟು ನೀಡಿದ ಅವರು,ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡ್ತಾರೆ. ಒಂದುಕಡೆ ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡ್ತಾರೆ. ಇದು ಇಬ್ಬದಿಗೆತನ‌ ಅಲ್ಲವಾ ..? ಬಿಜೆಪಿಯವರಿಗೆ ಸ್ಪಷ್ಟವಾದ ನಿಲುವು ಇಲ್ಲ.
ನಮ್ಮ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದ ಯಾವ ಕೆಲಸಗಳು ಸ್ಥಗಿತವಾಗಿವೆ ಹೇಳಿ ಎಂದು ಪ್ರಶ್ನಿಸಿದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *