ಹುಬ್ಬಳ್ಳಿ: ಅವಳಿ ನಗರದಲ್ಲಿ ಫೈನಾನ್ಸ್ ವಿಚಾರಕ್ಕೇ ಹಾಡು ಹಗಲೇ ಮಹಿಳೆಯೊಬ್ಬಳನ್ನು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೇವಲ 10 ನಿಮಿಷದಲ್ಲಿ ಬಂಧನ ಮಾಡಿದ ಘಟನೆ ಮಧ್ಯಾಹ್ನ ಬ್ಯಾಂಕರ್ಸ್ ಕಾಲೊನಿಯಲ್ಲಿ ನಡೆದಿದೆ.
ಬ್ಯಾಂಕರ್ಸ್ ಕಾಲೋನಿಯಲ್ಲಿ ವಾಸವಿದ್ದ ಸುವರ್ಣಾ ಹಾಗೂ ಪಲ್ಲವಿ ಎಂಬ ಮಹಿಳೆಯರಿಗೆ ಹೇಗ್ಗೇರಿ ಮೂಲದ ಅಭಿಷೇಕ ಎಂಬಾತ ಫೈನಾನ್ಸ್ ಮಾಡಿದ್ದ. ಸುವರ್ಣಾ ಹಾಗೂ ಹಲ್ಲೆಗೊಳಗಾದ ಪಲ್ಲವಿ ಕೂಡಾ ಸ್ನೇಹಿತೆಯರಾಗಿದ್ದರೂ ಈ ನಡುವೆ ಅಭಿಷೇಕ ಹಾಗೂ ಸುವರ್ಣಾಳ ನಡುವೆ ಅತಿಯಾದ ಸ್ನೇಹ ಬೆಳೆದ ಹಿನ್ನೆಲೆ ಅಭಿಷೇಕ್ ಮನೆಯವರಿಗೆ ಇವರಿಬ್ಬರ ಸ್ನೇಹದ ವಿಚಾರ ಗೊತ್ತಾಗಿದೆ.
ಇದರಿಂದ ಆಕ್ರೋಶಗೊಂಡ ಅಭಿಷೇಕ ಸುವರ್ಣಾ ಮತ್ತು ನನ್ನ ಸ್ನೇಹದ ಬಗ್ಗೆ ನಮ್ಮ ಮನೆಯವರಿಗೆ ಈ ವಿಚಾರ ಹೇಳಿದ್ದು ಪಲ್ಲವಿ ಎಂದು ತಿಳಿದು ಬ್ಯಾಂಕರ್ಸ್ ಕಾಲೋನಿಯಲ್ಲಿರುವ ಆಕೆಯ ಮನೆಗೆ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತೆರಳಿ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ,ಪಲ್ಲವಿ ಕಿವಿ ಹಾಗೂ ಕೈ ಕಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಗೋಕುಲ್ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹಲ್ಲೆ ಮಾಡಿದ ನಂತರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಪಲ್ಲವಿಯನ್ನು ಸ್ಥಿತಿ ಕಂಡು ಎಸ್ಕೆಪ್ ಆಗಲು ಯತ್ನಿಸಿದ ಅಭಿಷೇಕ ನನ್ನು ಹಳೇ ಹುಬ್ಬಳ್ಳಿ ಠಾಣೆಯ ಸಿ ಪಿ ಐ ಸುರೇಶ್ ಯಳ್ಳೂರ್, ಪಿಎಸ್ಐ ಆರ್‌ಎನ್ ಗುಡದಾರಿ, ಎ ಎಸ್ ಐ ಪಿ ಬಿ ಕಾಳೆ ಸಿಬ್ಬಂದಿಗಳಾದ ಎಚ್ ಸಿ- ಎ ಪಿ ಕಟ್ನಳ್ಳಿ , ಕೃಷ್ಣಾ ಮೋಟಬೆನ್ನೂರು, ಸಂತೋಷ ವಲ್ಯಾಪುರಾ , ನಾಗರಾಜ ಕೆಂಚನ್ನವರ, ಮತ್ತು ಪಿ ಸಿ ಸಿಬ್ಬಂದಿಗಳಾದ ರಮೇಶ್ ಹಲ್ಲೆ, ಕೆ ವಿ ಗುರನಗೌಡ್ರು, ವಿಠ್ಠಲ್ ಹೊಸಳ್ಳಿ ಆರೋಪಿಯನ್ನು ಹತ್ತು ನಿಮಿಷಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಅಭಿಷೇಕ ನನ್ನು ವಶಕ್ಕೆ ಪಡೆದಿರೋ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಅಭಿಷೇಕ ಹಲ್ಲೆ ನಡೆಸಲು ಕಾರಣ ಏನು,ಇದು ಫೈನಾನ್ಸ್ ವಿಚಾರಕ್ಕೇ ನಡೆಯಿತಾ ಅಥವಾ ಅದನ್ನು ಹೊರತುಪಡಿಸಿ ಬೇರೆ ಯಾವುದಾದರೂ ಕಾರಣಕ್ಕೆ ಈ ಘಟನೆ ನಡೆಯಿತಾ ಎಂಬ ಮಾಹಿತಿ ಪೊಲೀಸರ ಸಮಗ್ರ ತನಿಖೆಯಿಂದ ತಿಳಿದು ಬರಬೇಕಿದೆ. ಅಷ್ಟೇ ಅಲ್ಲದೇ ಎಸ್ಕೆಪ್ ಆಗಲು ಯತ್ನಿಸಿದ ಆರೋಪಿಯನ್ನು ಕೇವಲ 10 ನಿಮಿಷದಲ್ಲಿ ಹಿಡಿದ ಪೊಲೀಸ್ ಸಿಬ್ಬಂದಿಗಳಿಗೆ ಕಮಿಷನರ್ ಎನ್ ಶಶಿಕುಮಾರ್ ರಿವಾರ್ಡ್ ಘೋಷಣೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

