ಮಂಗಳೂರು:ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ
ಹೊಟೇಲೊಂದರಲ್ಲಿ ಆಹಾರ ಸೇವಿಸಿ 40ರಷ್ಟು ಮಂದಿ
ಅಸ್ವಸ್ಥರಾಗಿದ್ದು ಆಸ್ಚತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇಬ್ಬರ ಸ್ಥಿತಿ
ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹೊಟೇಲು ಯಾವುದೇ ಎಗ್ಗಿಲ್ಲದೆ ತೆರೆದು
ಕಾರ್ಯಾಚರಿಸುವುದನ್ನು ಮನಗಂಡ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ
ಮತ್ತು ಶಫೀಕ್ ಅರಫಾ ಹೊಟೇಲಿನ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿ ಆರೋಗ್ಯ ಅಧಿಕಾರಿಗಳ
ನೆರವಿನೊಂದಿಗೆ ಹೊಟೇಲನ್ನು ಮುಚ್ಚುಗಡೆಗೊಳಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಆಸ್ಪತ್ರೆಗೆ
ದಾಖಲಾದವರ ಪೈಕಿ ಹೆಚ್ಚಿನ ಮಂದಿ ಕಾಸರಗೋಡಿನವರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





