Breaking News

ಪ್ರಧಾನಮಂತ್ರಿ ರೋಜಗಾರ್ ಮೇಳ: ಇಂದು 71 ಸಾವಿರ ಯುವಕರಿಗೆ ಮೋದಿಯವರಿಂದ ನೇಮಕಾತಿ ಪತ್ರ ವಿತರಣೆ

ನವದೆಹಲಿ: ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ನೇಮಕಗೊಂಡಿರುವ 71 ಸಾವಿರ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಿದ್ದಾರೆ. ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫ್​​ರೆನ್ಸ್​ ಮೂಲಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ದೇಶದ 45 ಸ್ಥಳಗಳಲ್ಲಿ ಪ್ರಧಾನ ಮಂತ್ರಿ ರೋಜಗಾರ್ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಸೃಷ್ಟಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಬದ್ಧತೆಯ ಭಾಗವಾಗಿ ಈ ಉದ್ಯೋಗ ಮೇಳ ನಡೆಯುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ನಾನಾ ಸಚಿವಾಲಯಗಳು/ಇಲಾಖೆಗಳಿಗೆ ಹೊಸ ನೇಮಕಾತಿಗಳು ನಡೆಯಲಿವೆ.

Share News

About BigTv News

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *