ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕೆ ಎಲ್ ಇ ಸಂಸ್ಥೆಯ ಜೆಜಿ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಾಗೂ ಇದೇ ಕಾಲೇಜಿನಲ್ಲಿ ಕಲಿತು ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಎಲ್ಲಾ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ಪ್ರಾರಂಭವಾಗಿ 75 ವಸಂತಗಳನ್ನು ಪೂರೈಸಿರುವದರಿಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹಾಗೂ ಕಿರಿಯ ವಿದ್ಯಾರ್ಥಿಗಳೊಂದಿಗೆ ತಮ್ಮ ಕಾಲೇಜು ದಿನಗಳನ್ನು ಮರುಕಳಿಸಿಕೊಂಡರು.

ಈ ಸಂದರ್ಭದಲ್ಲಿ KLE ಸೊಸೈಟಿ ಚೇರ್ಮನರಾಧ ಶ್ರೀ ಪ್ರಭಾಕರ್ ಕೋರೆ, ಅತಿಥಿಗಳಾಗಿ ಹೈಕೋರ್ಟಿನ ನಿವೃತ ನ್ಯಾಯಮೂರ್ತಿಗಳಾದ ಶ್ರೀ ಸುಭಾಷ್ ಅಡಿ ಸೇರಿದಂತೆ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾದ ಹಿರಿಯರಾದ S R ಹಿರೇಮಠ ಅವರು, ಉದ್ದಮೇದರಾದ ಶ್ರೀ ಆನಂದ್ ಸಂಕೇಶ್ವರ, ಶಾಸಕ ಶ್ರೀನಿವಾಸ್ ಮಾನೆ ಹಾಗೂ ಶಾಸಕ ಎಂಆರ್ ಪಾಟೀಲ್, ರಾಜಣ್ಣ ಕೊರವಿ, ಶಂಕ್ರಣ್ಣ ಮುನ್ವಳ್ಳಿ ಜೆಡಿಎಸ್ ಪಕ್ಷದ ಹುಬ್ಬಳ್ಳಿ ಧಾರವಾಡ ಮುಖಂಡರಾದ ಶ್ರೀ ಸಿದ್ದಲಿಂಗೇಶ್ವರಗೌಡ ಮಹಾಂತ ಒಡೆಯರ, ಸೇರಿದಂತೆ ಅನೇಕ ರಾಜಕೀಯ ನಾಯಕರುಗಳು, ಪೊಲೀಸ್ ಅಧಿಕಾರಿಗಳು, ನ್ಯಾಯವಾದಿಗಳು, ಲೆಕ್ಕಪರಿಶೋಧಕರು, ಉದ್ಯಮಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಉನ್ನತ ಪದವಿಯಲ್ಲಿ ಇರುವಂತಹ ಇದೇ ಪ್ರತಿಷ್ಠಿತ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಆಗಮಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

