ಮನೆಯಿಂದ ಬರುತ್ತಿದ್ದ ದುರ್ವಾಸನೆಯನ್ನು ಗಮನಿಸಿ ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ, ಕೋಣೆಯೊಳಗೆ ಶಬೀನಾ ಮತ್ತು ಅವರ ಮಗಳು ಇನಾಯಾ ಅವರ ಶವಗಳು ಪತ್ತೆಯಾಗಿವೆ. ರಾತ್ರಿ ಪತ್ತೆಯಾಗಿರುವ ಮೃತದೇಹಗಳು ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಹಳೆಯದಾಗಿರಬಹುದು ಎಂದು ಊಹಿಸಲಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಶಬೀನಾ ರಶೀದ್ ಅವರನ್ನು ಮದುವೆಯಾಗಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. “ರಶೀದ್ ಪರಾರಿಯಾಗುವ ಮೊದಲು ತನ್ನ ಪತ್ನಿ ಮತ್ತು ಮಲ ಮಗಳನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ . ಶಬೀನಾಳನ್ನು ಎರಡನೇ ಪತ್ನಿಯಾಗಿ ಮದುವೆಯಾಗಿದ್ದ” ಎಂದು ಎಸಿಪಿ ತಿವಾರಿ ಹೇಳಿದ್ದು, ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೋಡಿ ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

