ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸಿಬ್ಬಂದಿಗಳ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ರೌಡಿಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಪುಟ್ಟ ಮಕ್ಕಳ ಮೇಲೆಯೇ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಜನಸ್ನೇಹಿ ಹೆಸರಲ್ಲಿ ಜನರಿಗೆ ಸಂಕಷ್ಟ ತಂದೊಡ್ಡುವ ಖಾಕಿ ಕಾರ್ಯಕ್ಕೆ ಈಗ ಎಲ್ಲೆಡೆಯೂ ಬೇಸರ ಮೂಡಿದೆ.ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೇರದ ಪೊಲೀಸ್ ಕಾನ್ಸ್ ಟೇಬಲ್ ನ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಹುಬ್ಬಳ್ಳಿಯಲ್ಲಿ ತಡರಾತ್ರಿ ಗಸ್ತು ಪೊಲೀಸ್ ಸಿಬ್ಬಂದಿಯಿಂದ ಬಾಲಕನ ಮೇಲೆ ಹಲ್ಲೆ ಮಾಡಿದ್ದು, ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಖಲಿಲ್ ಅಹ್ಮದ್ ಎಂಬುವರ ಪುತ್ರ 12 ವರ್ಷದ ಪೈಜಾನ್ ಎನ್ನುವ ಬಾಲಕನ ಮೇಲೆ ಪೊಲೀಸ್ ಕ್ರೌರ್ಯ ಮೆರೆದಿದ್ದು, ಮಧ್ಯರಾತ್ರಿ ಮನೆ ಮುಂದೆ ಬಯಲು ಶೌಚಕ್ಕೆ ಬಂದಾಗ ಹಲ್ಲೆ ಮಾಡಿರುವ ಪೊಲೀಸ್ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದ್ದು,ಮಧ್ಯರಾತ್ರಿ ಕಿಮ್ಸ್ ಗೆ ತೆರಳಿ ಬಾಲಕನಿಗೆ ಚಿಕಿತ್ಸೆ ನೀಡಿ MLC ಮಾಡಿಸಿದ್ದಾರೆ.ಜನರಿಗೆ ರಕ್ಷಣೆ ಕೊಡಬೇಕಿರುವ ಪೊಲೀಸರೇ ಈಗ ಜನರಲ್ಲಿ ಭಯ ಹುಟ್ಟಿಸಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಕಾರ್ಯವೈಖರಿ ಜನರಲ್ಲಿ ಬೇಸರ ಮೂಡಿಸಿದೆ. ರೌಡಿಗಳನ್ನು ಗುಂಡಾಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಚಿಕ್ಕ ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿಯೇ ಶಿಸ್ತು ಎಂಬುವುದು ಇಲ್ಲವೇ..? ಪೊಲೀಸ್ ಆಯುಕ್ತರೇ ಇದೇನಾ ನಿಮ್ಮ ಜನಪರ ಕಾಳಜಿ ..???
bigtvnews | Hubli Dharwad News | Kannada News | Karnataka News Hubli News | News In Hubli | Local news

