ಮಡಿಕೇರಿಯಲ್ಲಿ ಘೋರ ಘಟನೆ ಒಂದು ಸಂಭವಿಸಿದ್ದು ಪತಿಯೊಬ್ಬ ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್ ಸೂಸೈಡ್ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಸಿಂಕೋನ ಪ್ರದೇಶದಲ್ಲಿ ನಡೆದಿದೆ.ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ.ಪತಿ ಜೈಲಿಗೆ ಹೋದ ಸಂದರ್ಭದಲ್ಲಿ ಪತ್ನಿ ಜ್ಯೋತಿ ತವರು ಮನೆ ಸೇರಿಕೊಂಡಿದ್ದರು. ಜೈಲಿಂದ ರಿಲೀಸ್ ಆಗಿದ್ದ ಕೀರ್ತನ್ ನಿನ್ನೆ (ನ.15) ಸಂಜೆ ಪತ್ನಿಯನ್ನ ತನ್ನ ಮನೆಗೆ ಕರೆತರಲು ಹೋಗಿದ್ದಾನೆ. ಎಷ್ಟೇ ಕರೆದರೂ ಪತ್ನಿ ಬರಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಪತಿ ನಿನ್ನೆ ಸಂಜೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆಯೂ ಸಾಕಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೀರ್ತನ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇಂದು ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

