ಹುಬ್ಬಳ್ಳಿ: ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ನಿರಂಜನ ಹಿರೇಮಠ್ ಹೊಸ ಶಂಕೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಹೇಳಿಕೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಆರೋಪದಲ್ಲಿ ಬಂಧಿತನಾಗಿರುವ ಸಮೀರ್ ಹಾಗೂ ಆತನ ಕುಟುಂಬದ ಪಾತ್ರ ಇರಬಹುದೆಂದು ಗಂಭೀರವಾಗಿ ಆರೋಪಿಸಿದ್ದಾರೆ. “ನೇಹಾ ಹಂತಕ ಫಯಾಜ್ ಕೂಡ ಇದೇ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದ. ಸಮೀರ್ ತಂದೆ ನನಗೆ ಪದೇಪದೇ ಕರೆ ಮಾಡಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಸಹಾಯ ಕೇಳುತ್ತಿದ್ದರು. ಮನೆಗೆ ಬನ್ನಿ, ಊಟಕ್ಕೆ ಬನ್ನಿ ಎಂದು ಒತ್ತಾಯಿಸುತ್ತಿದ್ದರು,” ಎಂದು ಅವರು ಹೇಳಿದ್ದಾರೆ. “ನಾನು ಜಂಗಮ ಸಮಾಜದವನಾಗಿ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದು ಹೇಳಿ ಹೋಗಲಿಲ್ಲ. ಆದರೆ ನಾನು ಹೋಗಿದ್ದರೆ ಯಾವುದೋ ಟ್ರ್ಯಾಪ್ ಮಾಡುವ ಯತ್ನ ಇರಬಹುದೆಂಬ ಅನುಮಾನ ಮೂಡುತ್ತಿದೆ,” ಎಂದು ತಿಳಿಸಿದ್ದಾರೆ. ಇದಲ್ಲದೆ, ಸಮೀರ್, ಆತನ ಸಹೋದರಿ ಮತ್ತು ತಂದೆಯ ಕೈವಾಡವೂ ಹತ್ಯೆಯಲ್ಲಿ ಇರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರ ಮುಂದಿನ ಕ್ರಮಗಳತ್ತ ಗಮನ ಹರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

