Breaking News

ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ 18.81 ಲಕ್ಷ ರೂಪಾಯಿ ಕಳೆದುಕೊಂಡ 75 ವರ್ಷದ ಹಿರಿಯ ನಾಗರಿಕ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಕರ್ಷಕ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರ! ಕೇಂದ್ರ ಹಣಕಾಸು ಸಚಿವರ ವಿಡಿಯೋ ಬಳಸಿ ನಡೆದ ನಕಲಿ ಆನ್‌ಲೈನ್ ಟ್ರೇಡಿಂಗ್ ದಂದೆಗೆ ಸಿಲುಕಿ 75 ವರ್ಷದ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 18.81 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತರು ಫೇಸ್‌ಬುಕ್‌ನಲ್ಲಿ ಹಣಕಾಸು ಸಚಿವರ ಭಾಷಣವಿರುವ ಆನ್‌ಲೈನ್ ಟ್ರೇಡಿಂಗ್ ಕುರಿತ ವಿಡಿಯೋವೊಂದನ್ನು ನೋಡಿದ್ದರು. ಇದನ್ನು ನಿಜವೆಂದು ನಂಬಿದ ಅವರು ವಿಡಿಯೋ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ವಿವರಗಳನ್ನು ನೋಂದಾಯಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ ‘ಮೀನಾಕ್ಷಿ’ ಎಂಬ ಹೆಸರಿನ ವ್ಯಕ್ತಿಯಿಂದ ಕರೆ ಬಂದಿದ್ದು, ಹೆಚ್ಚಿನ ಲಾಭದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿದೆ. ಮೊದಲ ಹಂತವಾಗಿ ₹21,000 ಹಣವನ್ನು ವರ್ಗಾಯಿಸಿಕೊಂಡಿದ್ದಳು. ನಂತರ ಅಕ್ಷರಗೌಡ ಎಂಬ ವ್ಯಕ್ತಿ ಆನಂದ ಉನ್ನಿಕೃಷ್ಣ ಅವರ ಅಸಿಸ್ಟೆಂಟ್ ಎಂದು ಪರಿಚಯಿಸಿಕೊಂಡು, ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಾಟ್ಸಪ್ ಮೂಲಕ ಹೂಡಿಕೆಗೆ ಪ್ರೇರೇಪಿಸಿದ್ದನು. ಆರೋಪಿಗಳ ಮಾತು ನಂಬಿದ ವೃದ್ಧರು ಡಿಸೆಂಬರ್ 18ರಂದು ₹3 ಲಕ್ಷ, ಡಿಸೆಂಬರ್ 26ರಂದು ₹7 ಲಕ್ಷ, ಜನವರಿ 6ರಂದು ₹3 ಲಕ್ಷ ಹಾಗೂ ಜನವರಿ 12ರಂದು ₹5.60 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಒಟ್ಟು ₹18,81,000 ಹಣವನ್ನು ಹೂಡಿಕೆ ಮಾಡಿಸಿಕೊಂಡ ಆರೋಪಿಗಳು ₹1 ಕೋಟಿ ಲಾಭ ನೀಡುವುದಾಗಿ ನಂಬಿಸಿದ್ದರು. ಆದರೆ ಯಾವುದೇ ಲಾಭ ನೀಡದೆ ವಂಚಿಸಿರುವುದು ತಿಳಿದುಬಂದಾಗ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *