Breaking News

ದೇಶ ಸೇವೆಯೂ ತಾಯಿ ನಾಡಿನ ಋಣ ತಿರಿಸುವ ಸುಂದರ ಅವಕಾಶ: ಹಿರೇಮಠ

ಹುಬ್ಬಳ್ಳಿ: ದೇಶ ಸೇವೆಯೂ ತಾಯಿಗೆ ಹಾಗೂ ತಾಯಿ ನಾಡಿನ ಋಣ ತಿರಿಸುವ ಒಂದು ಅವಕಾಶವಾಗಿದೆ. ದೇಶ ನಮಗೇನು ಮಾಡಿದೇ ಎಂಬುದಕ್ಕಿಂತ ದೇಶಕ್ಕೆ ನಾವೇನೂ ಮಾಡಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೇವೆಸಲ್ಲಿಸಬೇಕು ಎಂದು ಬಿಎಸ್ಎಫ್ ಮಾಜಿ ಯೋಧರಾದ ಬಸಯ್ಯ ಹಿರೇಮಠ ಯುವ ಸಮುದಾಯಕ್ಕೆ ಕರೆ ನೀಡಿದರು.ಎಸ್ ಬಿ ಐ ಲೈಪ್ ಇನ್ಸೂರೇನ್ಸ್ ಹುಬ್ಬಳ್ಳಿ-2 ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಯೋಧರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಇಡಿ ದೇಶವೇ ಒಂದು ದೇವಾಲಯದಂತೆ ಅಲ್ಲಿರುವ ಭಾರತಾಂಭೆಗೆ ನಾವು ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು. ದೇಶ ಸೇವೆಯೇ ಈಶ ಸೇವೆಯಾಗಿದೆ‌. ಯುವ ಸಮುದಾಯ ಸದೃಡ ದೇಹ ಸದೃಡ ಕಾಯವನ್ನು ಹೊಂದುವ ಮೂಲಕ ವಿವೇಕಾನಂದರ ಮಾತಿನಂತೆ ಯುವಕರು ಸದೃಡರಾಗಿ ಭವ್ಯ ಭಾರತಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಅವರು ಹೇಳಿದರು.

Share News

About Shaikh BIG TV NEWS, Hubballi

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *