ಕಾಣ್ಮುಂದೆ ಕಾಣುವ ಜಗತ್ತಿನ ಹಿಂದೆ ಅತೀ ಅದ್ಬುತವಾಘಿರುವ ಜಗತ್ತು ಇತ್ತು
ಎಂಬುದು ಎಲ್ಲರಿಗೂ ಗೋತ್ತಿದೆ. ಆದಕ್ಕೆ ಹಲವು ಸಾಕ್ಷಿಗಳು ನಿದರ್ಶನಗಳಿವೆ. ಇಂತಹದರಲ್ಲಿ ಪ್ರಪಂಚದಲ್ಲಿ
ಹುಡುಕಾಟ ನಡೆಸಿದಷ್ಟು, ಅದರ ಮೂಲ ಅಗೆದಷ್ಟು ಅಚ್ಚರಿಗಳು ನಮ್ಮ ಮುಂದೆ ಬರುತ್ತವೆ. ಆದ್ರೇ ಅದಕ್ಕೆ
ನಿರ್ದಿಷ್ಟವಾಗಿ ಇಂತಹುವುದೇ ಕಾಲಮಾನದಲ್ಲಿ ಇತ್ತು ಎಂದು ಹೇಳುವುದು ಕಷ್ಟವಾದ್ರೂ ನಂಬಲ್ಲೇ ಬೇಕಾದ
ಸತ್ಯ. ಪ್ರಕೃತಿಯ
ವಿಸ್ಮಯವನ್ನ ಮನುಷ್ಯನಿಂದ ಭೇದಿಸಲು ಸಾಧ್ಯವಿಲ್ಲ. ಪ್ರಕೃತಿಯ ವಿರುದ್ಧ ತೆರಳುವ ಯಾವ
ದುಸ್ಸಾಹಸಕ್ಕೆ ಕೈ ಹಾಕಿದರೂ ಅದು ಫಲಿಸಲು ಸಾಧ್ಯವೇ ಇಲ್ಲ. ತನ್ನ ಮಡಿಲಲ್ಲಿ ಪ್ರಕೃತಿಯು
ಸಾಕಷ್ಟು ರಹಸ್ಯಗಳನ್ನ ತನ್ನ ಗರ್ಭದಲ್ಲಡಗಿಸಿಕೊಂಡಿದ್ದು ಅಂತಹ ರಹಸ್ಯಗಳ ಬಗ್ಗೆ ಮಾನವ ತಲುಪಲು
ಅಸಾಧ್ಯದ ಮಾತೇ ಸರಿ. ಆದರೂ ಮನುಷ್ಯ ತಾನು ಇಂತಹ ಅಗೋಚರ, ವಿಸ್ಮಯ ರಹಸ್ಯಗಳ ಕುರಿತಾಗಿ ಅಧ್ಯಯನ, ಶೋಧ ನಡೆಸುತ್ತಲೇ ಇರುತ್ತಾನೆ. ಹೌದು
ಇದೀಗ ಅಂತಹ ರಹಸ್ಯಮಯ ಜಾಗವೊಂದು ಪತ್ತೆಯಾಗಿದ್ದು ಜಗತ್ತನ್ನೇ ಅಚ್ಚರಿಗೊಳಪಡಿಸಿದೆ.
ನಿಮಗೆ ನಂಬಲು
ಅಸಾಧ್ಯವೆನಿಸಬಹುದು ನೂರಾರು ವರ್ಷಗಳ ಹಿಂದೆ ಕಣ್ಮರೆಯಾಗಿ ಹೋಗಿದ್ದ ಈಜಿಪ್ಟಿನ ಒಂದು ದೊಡ್ಡ ಊರು ಸಮುದ್ರದಲ್ಲಿ
ಮುಳುಗಡೆಯಾಗಿ ಅಲ್ಲೊಂದು ಊರಿತ್ತು ಅನ್ನೋ ನಿಶಾನೆಯನ್ನೇ ಅಳಿಸಿ ಹಾಕಿತ್ತು. ಪುರಾತತ್ವ
ವಿಜ್ಞಾನಿಗಳ ಸಾಕಷ್ಟು ಪರಿಶ್ರಮದ ಬಳಿಕ ಭೂಮಧ್ಯೆ ಸಾಗರದ ಗರ್ಭದಲ್ಲಿ ಮಲಗಿದ್ದ 1200 ವರ್ಷಗಳಷ್ಟು ಹಳೆಯದಾದ
ಪುರಾತನ ನಗರವಾಗಿದ್ದ ಹೆರಾಕಲೊಯೋನ್ ನ ಅವಶೇಷಗಳನ್ನು ಜಗತ್ತಿನೆದುರು ತರಲು ಸಫಲರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





