Breaking News

ಹುಬ್ಬಳ್ಳಿ: ಚಿರತೆ ಹಾವಳಿಗೆ ಕಲಘಟಗಿಯ ಕಾಡಂಚಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರತೆಗಳ ಗುಂಪೊಂದು ನಡೆಸಿದ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬುವರಿಗೆ ಸೇರಿದ ಎತ್ತು ಚಿರತೆಗಳ ದಾಳಿಗೆ ಬಲಿಯಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಸೇರಿ ದಾಳಿ ನಡೆಸಿ ಎತ್ತಿನ್ನ ಬಲಿ ಪಡೆದಿವೆ. ರಾತ್ರಿ ಹೊಲದ ಮನೆಯಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತುಗಳಲ್ಲಿ ಒಂದು ಕಾಣೆಯಾಗಿತ್ತು. ಬೆಳಗ್ಗೆ ತಾನಾಗಿಯೇ ಮನೆ

ಎತ್ತು ಮರಳಿತ್ತು. ನಂತರ ಮೇಯಲು ಕಬ್ಬಿನ ಗದ್ದೆಗೆ ತೆರಳಿದಾಗ ಚಿರತೆಗಳು ದಾಳಿ ಮಾಡಿವೆ.
ಇನ್ನೂ ಮೇಯಲು ಹೋದ ಎತ್ತು ಮರಳಿ ಬಾರದಿದ್ದಾಗ ಎತ್ತು ಹುಡುಕಿಕೊಂಡು ಕಬ್ಬಿನ ಗದ್ದೆಗೆ ಹೋದ ರೈತನಿಗೆ ಸ್ವಲ್ಪ ದೂರದಲ್ಲಿ ಮೂರು ಚಿರತೆಗಳು ಸೇರಿ ಎತ್ತನ್ನು ತಿನ್ನುವುದನ್ನು ಕಂಡು ಪ್ರಾಣಭಯದಿಂದ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *