Breaking News

ವಿಶ್ವಾಸ ಮತದಲ್ಲಿ ಭಾಗಿಯಾಗದಿರಲು ಶಾಸಕ ಮಹೇಶ ನಿರ್ಧಾರ

ಚಾಮರಾಜನಗರ: ನಾಳೆ ನಡೆಯುವ ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ ಎಂದು ಬಿ ಎಸ್ ಪಿ ಶಾಸಕ ಎನ್ ಮಹೇಶ್ ಇಂದಿಲ್ಲಿ ಹೇಳಿದ್ದಾರೆ. ಸಮ್ಮಿಶ್ರ ಸಕಾ೯ರದ ವಿಶ್ವಾಸ ಮತ ಯಾಚನೆ ವೇಳೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಟಸ್ಥರಾಗಿರುವುದಾಗಿ ಸ್ಪಷ್ಟಪಡಿಸಿದ್ದು, ವರಿಷ್ಠರಿಂದ ಸೂಚನೆ ಬಂದಿರುವ ಹಿನ್ನೆಲೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ವಿಶ್ವಾಸ ಮತ ಯಾಚನೆ ವೇಳೆ ತಟಸ್ಥರಾಗುವಂತೆ ಶಾಸಕ ಎನ್.ಮಹೇಶ್ ಗೆ ಮಾಯಾವತಿಯಿಂದ ಸೂಚನೆ ಬಂದಿರುವ ಹಿನ್ನಲ್ಲೆ ನನ್ನ ಖಾಸಗಿ ಕೆಲಸದಿಂದ ಎರಡು ದಿನ ಕಲಾಪಕ್ಕೆ ಭಾಗವಹಿಸಲಿಲ್ಲ. ಇನ್ನೆರಡು ದಿನ ನಾನು ಅಸೆಂಬ್ಲಿಗೆ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡುತ್ತೇನೆಂದು ಕೊಳ್ಳೇಗಾಲದಲ್ಲಿ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿಕೆ ನೀಡಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *