ಬಳ್ಳಾರಿ: ರಾಜ್ಯವು ಬ್ರಷ್ಠ ಅಧಿಕಾರಿಗಳ ತಾಂಡವಕ್ಕೆ ನಲುಗುತ್ತಿದೆ ಎಂಬ ಸಾವ೯ಜನಿಕರ ಅರಣ್ಯ ರೋಧನದ ನಡುವೆ ಬ್ರಷ್ಠರನ್ನು ಹಿಡಿಯೋದರಲ್ಲಿ ತಾವು ಎಂದಿಗೂ ಮುಂದೆ ಎಂಬ ದಿಟ್ಠನದ ಸಿಂಹ ಘಜ೯ನೆಯೊಂದಿಗೆ ಬ್ರಷ್ಠರ ಪಾಲಿಗೆ ಸಿಂಹ ಸ್ವಪ್ನ ವಾಗುತ್ತಿದ್ದಾರೆ ಬಳ್ಳಾರಿಎಸಿಬಿ ಅಧಿಕಾರಿಗಳು. ಬಳ್ಳಾರಿ ಜಿಲ್ಲೆಯ ಸಾಕಷ್ಟು ಭ್ರಷ್ಟ ಕುಳಗಳನ್ನ ತಮ್ಮ ಬಲೆಗಾಕಿ ಬುದ್ದಿ ಕಲಿಸೋ ಮೂಲಕ ಗಣಿ ನಾಡಿನ ಎಸಿಬಿ ಅಧಿಕಾರಿಗಳು ನಿರಂತರ ಕಾರ್ಯಚರಣೆಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ.ಇದಕ್ಕೆ ತಾಜಾ ನಿದಶ೯ನ ಜುಲೈ 21ರಂದು ಅಬಕಾರಿ ಜಂಟಿಆಯುಕ್ತ ಮೋಹನ ಎಂಬ ಬ್ರಷ್ಠನನ್ನು ಹಿಡಿ ದಿರುವುದು. ಹೊಸಪೇಟೆ ತಾಲೂಕಿನ ಗುಂಡಾ ಅರಣ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಬಳ್ಳಾರಿ ಎಸಿಬಿ ಅಧಿಕಾರಿಗಳು ಮಿಂಚಿನ ದಾಳಿ ಮಾಡಿದಾಗ ಕಾರಿನ ಡಿಕ್ಕಿಯಲ್ಲಿ ಎಲ್ಲಾ ಶಾಪ್ ಗಳಿಂದ ಸಂಗ್ರಹಿಸಿಟ್ಟಿದ್ದ 11,36,500/- ರೂ. ಹಣದೊಂದಿಗೆ ಈ ಜಂಟಿ ಆಯುಕ್ತ ಮೋಹನ್ ಕುಮಾರ್ ಸಿಕ್ಕಿ ಬಿದ್ದಿದ್ದಾನೆ. ಬಳ್ಳಾರಿ ಎಸಿಬಿ ಡಿವೈಎಸ್ಪಿ ಚಂದ್ರಕಾಂತ್ ಹಾಗೂ ಸಿಪಿಐ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆದರೆ ಈ ಭ್ರಷ್ಟ ಮಿಕ ನಾನ ಕಾಯಿಲೆಗಳ ನೆಪವೂಡ್ಧಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇವನನ್ನ ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಅಬಕಾರಿ ಇಲಾಖೆಯಲ್ಲಿ ಯಾವ ಮಟ್ಟಕ್ಕೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಅನ್ನೊದಕ್ಕೆ
ತಿಂಗಳ ಮಾಮೂಲಿ ಎತ್ತಿ ಎಂಜಲು ಕಾಸಿಗೆ ಕೈ ಚಾಚಿ ಸಿಕ್ಕಿಬಿದ್ದ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಮೋಹನ್ ಕುಮಾರ್ ನೇ ಇವತ್ತು ಸಾಕ್ಷಿಯಾಗಿ ನಿಂತಿದ್ದಾನೆ. ತಮ್ಮ ಇಲಾಖಾಕಾಯ೯ಚಟುವಟಿಕೆಗಳಿಂದ ಜಿಲ್ಲೆಯ ಪ್ರತಿ ಸರಕಾರಿ ಕಛೇರಿಗಳ ಮುಂದೆ ಎಸಿಬಿ ಅಧಿಕಾರಿಗಳು ತಮ್ಮ ಇಲಾಖೆಯ ನಾಮಫಲಕಗಳನ್ನ ಹಾಕಿ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಲ್ಲಿ ಆರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ಮಾಡ್ತನೆ ಬರುತ್ತಿದ್ದಾರೆ ಒಟ್ಟಾರೆಯಾಗಿ ಬಳ್ಳಾರಿ ಎಸಿಬಿಯವರು ನಿರಂತರ ಬ್ರಷ್ಟರ ವಿರುದ್ಧ ಸಮರ ಸಾರುತಿದ್ದು ಬ್ರಾಷ್ಠರ ಪಾಲಿಗೆ ವಕ್ರ ದೃಾಷ್ಠಿ ಬೀರೋ ಮೂಲಕ ಬ್ರಷ್ಟರ ನಿದ್ದೆಗೆಡಿಸಿದ್ದು ಸಾವ೯ಜನಿಕರಲ್ಲಿ ಎಸಿಬಿ ಇಲಾಖೆ ಬಗ್ಗೆ ಅಭಿಮಾನ ಇಮ್ಮಡಿಗೊಳಿಸಿದೆ ಅದಕ್ಕಾಗಿ ಗಣಿನಾಡಿನ ಜನ ಎಸಿಬಿ ಅಧಿಕಾರಿಗಳಿಗೆ ಹ್ಯಾಟ್ಸಾಫ್ ಹೇಳಿದ್ದಾರೆ. **ಬ್ರಷ್ಠ ಪೊಲೀಸ್ ರ ಹೆಡೆಮುರಿಕಟ್ಟಿ**ಬಳ್ಳಾರಿ ಜಿಲ್ಲೆಯ ಕೆಲೆವೆಡೆಯ ಪೊಲೀಸ್ ಠಾಣೆಗಳಲ್ಲಿ ಕೆಲ ಕಡು ಬ್ರಷ್ಠ ಪೊಲೀಸ್ ಅಧಿಕಾರಿಗಳಿದ್ದಾರೆಂಬ ಹಾಗೂ ಅವಧಿಗಿಂತಲೂ ಹೆಚ್ಚು ವಷ೯ಗಳ ಕಾಲ ಒಂದೆಡೆಯೇ ಇದ್ದುಕೊಂಡು ಅಕ್ರಮಕೋರರ ನೆರವಿಗೆ ನಿಂತಿರುವ ಆರೋಪಗಳು ಇದ್ದು.ಅಂತಹ ಬ್ರಷ್ಠ ಅಧಿಕಾರಿಗಳ ಮೇಲೆ ಹಾಗೂ ಬ್ರಷ್ಠ ಪೊಲೀಸ್ ಸಿಬ್ಬಂಧಿಗಳ ಮೇಲೆ ಎಸಿಬಿ ಅಧಿಕಾರಿಗಳು ಸಾವ೯ಜನಿಕ ಹಿತಾಸಕ್ತಿಯ ಮೇರೆಗೆ ತೀವ್ರ ನಿಗಾವಹಿಸಬೇಕೆಂಬ ಧ್ವನಿ ಸಾವ೯ಜನಿಕ ವಲಯದಲ್ಲಿ ಪ್ರತಿಧ್ವನಿಸುತ್ತಿದೆ_
ವರದಿ:ವಂದೇ ಮಾತರಂ ವೃಷಭೇಂದ್ರ ಕೂಡ್ಲಿಗಿ-9008937428.
bigtvnews | Hubli Dharwad News | Kannada News | Karnataka News Hubli News | News In Hubli | Local news





