Breaking News

ಸಂಬಂಧಗಳು ಗಟ್ಟಿಯಾಗಲು ಸಾಮೂಹಿಕ ಆಚರಣೆ ಅವಶ್ಯಕ

ಯಾದಗಿರಿ:ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಯಿಂದ ಭವಾನಿ ಮಾತ ಪೋಟೋಗೆ ಮೆರವಣಿಗೆ ಮಾಡಿದರು.ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿ ನೆಲಯೂರಿದಾಗ ಮಾತ್ರ ಒಗ್ಗಟ್ಟು ಪ್ರದರ್ಶನ ತೋರಲು ಸಾಧ್ಯ. ಅಚಿತೆ ನಮ್ಮ ದೇಶದ ಸಂಸ್ಸøತಿಯಲ್ಲಿ ಅನೇಕ ಹಬ್ಬ ಹರಿದಿನಗಳ ಅಚರಣೆಗಳು ವಿಶೆಷತೆ ಹೊಂದಿದು, ಅವುಗಳ ಅಛರಣೆಯಿಂದ ಸಮಹದಲ್ಲಿ ಏಕತೆ ಮತ್ತು ಐಕ್ತಯರ ಮೂಡಿಸುತ್ತದೆ ಎನ್ನುವಲ್ಲಿ ಯಾಚ ಸಂದೇಹವಿಲ್ಲ.ಅಂತೆಯೇ ಆಷಾಡ ಮಾಸದ ಅಂಗವಾಗಿ ವಿಶೆಷ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ಯಿಂದ ಭವಾನಿ ಮಾತ ಪೋಟೋಗೆ ಮೆರವಣ ಗೆ ಮಾಡಿದರು. ನಾನಾಪೂರು ಮಹೇಂದ್ರಕರ್ ಮನೆಯಿಂದ ಸಿಹಿನೀರಿನ ಬಾವಿ ಪೋಲಿಸ್ ಸ್ಟೇಷನ್, ಆರ್ಯ ಸಮಾಜ, ಭವಾನಿ ದೇವಸ್ಥಾನ ಮತ್ತು ಸಮಾಜ ಅವರಣದ ವರೆಗೆ ಮೆರವಣ ಗೆ ಮಾಡಲಾಯಿತುಇಲ್ಲಿನ ಮಹೇಂದ್ರ ಕರ್ ಅವರ ಮನೆಯ ಆವರಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ರವಿವಾರ ಆಷಾಡ ಮಾಸದ ಸಾಮೂಹಿಕ ಭೋಜನ ಏರ್ಪಡಿಸದ್ದರು. ಮೊದಲಿಗೆ ಭಾವಸಾರ ಕ್ಷತ್ರಿಯ ಸಮಾಜದ ನೇತೃತ್ವದಲ್ಲಿ ಭವಾನಿ ಮಾತ ಪೂಜೆ ಪುನಸ್ಕಾರಗಳು ನಡೆದವು.ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿ ನೆಲೆಯೂರಲು ಹಾಗೂ ಸಮಾಜದಲ್ಲಿ ಒಗ್ಗಟ್ಟು ಬೆಳಸಲು ಇಲ್ಲಿನ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ಹಿಂದಿನಿಂದಲೂ ಆಷಾಢ ಮಾಸದಲ್ಲಿ ಒಂದೆಡೆ ಕುಳಿತು ಸಾಮೂಹಿಕವಾಗಿ ಊಟ ಸವಿಯುವ ಆಚರಣೆ ಮಾಡಿಕೊಂಡು ಬರುವ ರೂಢಿಯನ್ನು ನಡೆಸಿಕೊಂಡು ಬಂದಿದ್ದಾರೆ.ಆಷಾಢ ತಿಂಗಳಲ್ಲಿ ಎಲ್ಲೆಡೆ ಗಾಳಿ ಹೆಚ್ಚಾಗಿ ಬೀಸುತ್ತಿದ್ದು ಈ ಗಾಳಿ, ಮಳೆಯಿಂದ ರೈತರ ಬೆಳೆ, ಫಸಲು ಹಾಳಾಗಬಾರದು, ರೈತನ ಬದುಕು ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿರುತ್ತಾರೆ, ಗಾಳಿ ನಿಯಂತ್ರಣಕ್ಕೆ ನಮ್ಮ ಜನಾಂಗದವರು ಈ ಸಂದರ್ಭದಲ್ಲಿ ದೇವರಿಗೆ ಮೊರೆ ಹೋಗುತ್ತಾರೆ ಎಂದು ಸಮಾಜದ ಅಧ್ಯಕ್ಷ ರು ಮುಖೇಶ್ ಪತಂಗೆ ತಿಳಿಸಿದರು.ದರ್ಜಿ, ದಲ್ಲಾಳಿ, ಬಟ್ಟೆ ಅಂಗಡಿ, ಕೃಷಿ ಇತರೆ ಕಾಯಕದಲ್ಲಿ ತೊಡಗಿಸಿ ಕೊಂಡಿರುವ ಈ ಸಮುದಾಯದವರಿಗೆ ರೈತಾಪಿ ವರ್ಗದವರೆ ಆಸರೆ, ‘ರೈತ ನಕ್ಕರೆ ಜಗವೆಲ್ಲ ನಗುತ್ತದೆ’, ರೈತನ ಬದುಕು ಹಸನಾಗಬೇಕಾದರೆ ಆತ ಬೆಳೆದ ಬೆಳೆಗೆ ಅತಿ ಹೆಚ್ಚಿನ ಮಳೆಯಿಂದ ರೋಗ ರುಜಿನಗಳು ತಗುಲಬಾರದು, ಗಾಳಿಯ ಕಾಟ, ಪ್ರವಾಹ ಭೀತಿ ಇರಬಾರದು ಎಂಬ ಕಾರಣಕ್ಕೆ ಮೊದಲಿಗೆ ಭವಾನಿ ಮಾತ ಪೂಜೆ ಸಲ್ಲಿಸಿ ನಂತರ ದೇವಿಗೆ ನೈವೇದ್ಯ, ಸಮಾಜದವರು ತಂದ ಚಪಾತಿ, ಗುಗ್ಗರಿ, ಖರೀದ ಪದಾರ್ಥಗಳನ್ನು ಬುಟ್ಟಿಯಲ್ಲಿ ಮಿಶ್ರಣ ಮಾಡಿ ಎಲ್ಲಾರಿಗೂ ಹಂಚಿ ಸಮಾನತೆ ಸಾರಲಾಗುತ್ತಿದೆ, ಮಹಿಳೆಯರು ಆರುತಿ ಬೆಳಗಿ ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ಊಟ ಸವಿಯನ್ನು ಅನುಭವಿಸಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *