Breaking News

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಹುಬ್ಬಳ್ಳಿ ಬಾಲಕಿ..

ವಿಶ್ವಕ್ಕೇ ಸೊನ್ನೆಯ ಕೊಡುಗೆ ಕೊಟ್ಟ ದೇಶ ನಮ್ಮದು. ವಿಜ್ಞಾನ, ಗಣಿತದಲ್ಲಿ ಭಾರತೀಯರ ಸಾಧನೆಯನ್ನ ಮರೆಯುವಂತಿಲ್ಲ. ಈಗೀಗ ಅಬ್ಯಾಕಸ್ ಸ್ಪರ್ಧೆಗಳು ವಿದ್ಯಾರ್ಥಿಗಳ ಚುರುಕುತನವನ್ನ ಒರೆಗೆ ಹಚ್ಚುತ್ತಿವೆ. ನಿಗದಿತ ಟೈಮ್ ನಲ್ಲಿ ಕಂಪ್ಯೂಟರ್ ಗಿಂತಲೂ ವೇಗವಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಕ್ಸಸ್ ಕಾಣೋದು ಅಷ್ಟು ಸಲೀಸಲ್ಲ. ಆದ್ರೇ, ಹುಬ್ಬಳ್ಳಿಯ ಬಾಲಕಿಯೊಬ್ಬಳು ಈಗ ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಿದಾಳೆ.
ಪಟಾಪಟಾ ಲೆಕ್ಕ ಹಾಕ್ತಾಳೆ. ಅವು ಬರೀ ಲೆಕ್ಕವಲ್ಲ. ಗಣಿತದಲ್ಲಿರೋ ಕಗ್ಗಂಟು. ಗಣಿತ-ಸಂಖ್ಯಾಶಾಶ್ತ್ರದಲ್ಲಿರೋ ಇಂಥ ಸಮಸ್ಯೆಗಳನ್ನ ಕಣ್ಮುಚ್ಚಿ ಕಣ್ ತೆರೆಯೋವಷ್ಟರಲ್ಲಿಯೇ ಮಾಡಿ ಮುಗಿಸೋ ಜಾಣ್ಮೆ ಹೊಂದಿರೋ ಬಾಲಕಿಯ ಇವಳು. ಅರಳು ಹುರಿದಂತೆ ಮಾತಾಡ್ತಾಳೆ. ಈಕೆ ಪ್ರತಿಭೆಗೆ ಕಂಡ್ರೇ ಎಲ್ರೂ ಅಕ್ಕರೆಯಿಂದಲೇ ಮನಸೋಲ್ತಾರೆ. ಹುಬ್ಬಳ್ಳಿಯ ಸಾನ್ವಿ ಅಂಗಡಿ ಅನ್ನೋ ಈ ಪೋರಿ ಅಬ್ಯಾಕಸ್ ಅಂದ್ರೇ ಗಣಿತ ಮತ್ತು ಸಂಖ್ಯಾಶಾಸ್ತ್ರಕ್ಕೆ ಸೇರಿದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಂಚಿ ನಾಡಿನ ದೇಶದ ಕೀರ್ತಿಯನ್ನ ಹೆಚ್ಚಿಸಿದಾಳೆ. ಎಲ್ರೂ ಹೆಮ್ಮೆ ಪಡುವಂತೆ ಮಾಡಿದಾಳೆ. ಥೈಲ್ಯಾಂಡಿನ ಕೋರಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚೀನಾ, ಹಾಂಕಾಂಗ್, ಕೋರಿಯಾ, ಮಲೇಷಿಯಾ, ಸಿಂಗಾಪೂರ್ ಸೇರಿದಂತೆ ವಿಶ್ವದ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ತುಂಬಾ ಜಟಿಲ ಸಮಸ್ಯೆಗಳನ್ನ ಕ್ಷಣಾರ್ಧದಲ್ಲಿಯೇ ಪಟಾಪಟ್ ಅಂತ ಬಿಡಿಸಿದಾಳೆ. ಆ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಹೆಮ್ಮೆ ಮೂಡಿಸಿದಾಳೆ ಇದೇ ಪೋರಿ ಸಾನ್ವಿ.
ಅಕ್ಷತಾ ಶೆಣೈ. ಸಾನ್ವಿಗೆ ತರಬೇತಿ ನೀಡಿದವರು
ಸಾನ್ವಿ, ಹುಬ್ಬಳ್ಳಿಯ ಪರಿವರ್ತನ ಗುರುಕುಲ ಶಾಲೆಯಲ್ಲಿ 5ನೇ ತರಗತಿ ಓದುತ್ತಿದಾಳೆ. ಎಜ್ಯುಸ್ಮಾರ್ಟ್‌ ಇಂಕ್‌ ಸಂಸ್ಥೆಯಲ್ಲಿ ಅಕ್ಷತಾ ಶೆಣೈ ಎಂಬುವರಿಂದ ಅಬ್ಯಾಕಸ್‌ ತರಬೇತಿ ಪಡೆದಿದಾಳೆ. ರಾಜ್ಯಮಟ್ಟದಲ್ಲಿ ಮಿಂಚಿ ಇದಾದ್ಮೇಲೆ ಮುಂಬೈನಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಸಾನ್ವಿ, ಅಂತಾರಾಷ್ಟ್ರೀಯಮಟ್ಟದ ಸ್ಪರ್ಧೆಗೆ ರಾಷ್ಟ್ರವನ್ನ ಪ್ರತಿನಿಧಿಸಿದ್ದಳು. ಕೊಟ್ಟ 3 ನಿಮಿಷದಲ್ಲಿಯೇ 100ಕ್ಕೂ ಹೆಚ್ಚು ಜಟಿಲವಾಗಿರೋ ಲೆಕ್ಕಗಳನ್ನ ಬಿಡಿಸ್ಬೇಕು. ಹಾಗೇ ಬಿಡಿಸೋದರಲ್ಲಿಯೇ ಸಾನ್ವಿ ಸೈ ಎನಿಸಿಕೊಂಡಿದಾಳೆ. ಗಣಿತ-ಸಂಖ್ಯಾಶಾಸ್ತ್ರಕ್ಕೆ ಸೇರಿದ ಈ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಇಡೀ ದೇಶವೇ ಹೆಮ್ಮೆಯಿಂದ ಬೀಗುವಂತ ಸಾಧನೆ ಮಾಡಿದಾಳೆ.
ಸಾನ್ವಿ ಅಂಗಡಿ,  ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿನಿ.
ಅಬ್ಯಾಕಸ್‌ ಮಕ್ಕಳ ಏಕಾಗ್ರತೆ, ಕ್ರಿಯಾಶೀಲತೆ ಹೆಚ್ಚಿಸುತ್ತೆ. ಎಲ್‌ಕೆಜಿಯಿಂದಲೇ ವಿದ್ಯಾರ್ಥಿಗಳು ಅಬ್ಯಾಕಸ್‌ ತರಬೇತಿ ಪಡೆಯಬಹುದು. ಮಕ್ಕಳು ಗಣಿತ ವಿಷಯದಲ್ಲಿ ಸಾಮರ್ಥ್ಯ ಹೆಚ್ಚಿಸಲು ದೇಶದಲ್ಲಿ ಈ ಮಾದರಿಯ ತರಬೇತಿ ಹೆಚ್ಚಿಸಬೇಕಾಗಿದೆ ಅಂತಿದಾರೆ ಸಾನ್ವಿ ಪೋಷಕರು. ಅಷ್ಟೇ ಅಲ್ಲ, ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ. ಆರ್ಥಿಕವಾಗಿ ಒಂದಿಷ್ಟು ನೆರವು ಜತೆಗೆ ಪ್ರೋತ್ಸಾಹ ಸಿಕ್ರೇ ಈಗಲೂ ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡೋ ಪ್ರತಿಭೆಗಳಿವೆ. ರಾಷ್ಟ್ರ-ಅಂತಾರಾಷ್ಟ್ರೀಯಮಟ್ಟದ ಸ್ಪರ್ಧೆಗಳಲ್ಲಿ ಕರೆದೊಯ್ಯೋಕೆ ಸಾಕಷ್ಟು ವೆಚ್ಚವಾಗುತ್ತೆ. ಇದನ್ನ ಸಾನ್ವಿ ಪೋಷಕರು ಹೇಗೋ ನಿಭಾಯಿಸಿದಾರೆ. ಇದೇ ರೀತಿಯ ಪೋಷಕರು ಬಡವರಿಗೆ ಸಿಗೋ ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರವೂ ಇಂಥ ಪ್ರತಿಭೆಗಳನ್ನ ಗುರುತಿಸುವಂತಾಗ್ಬೇಕು. 
Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *