Breaking News

ಕೆರೆಯಲ್ಲಿ ಸಿಕ್ಕಿಕೊಂಡ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕದಳದ ಸಿಬ್ಬಂದಿಗಳು

ನೀರು ಕುಡಿಯಲು ಹೋಗಿ ಕರೆಯ ಮಣ್ಣಿನಲ್ಲಿ ಸಿಲುಕಿದ್ದ ಹಸು ರಕ್ಷಣೆ ಮಾಡಲಾಗಿದೆ. ಇಂದು ಮುಂಜಾನೆ ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರ ವಲಯದಲ್ಲಿನ ಬೋಗಾರ ಕೆರೆಯಲ್ಲಿ ನಡೆದಿದೆ. ಬೋಗಾರ ಕೆರೆಯಲ್ಲಿ 1 ಗಂಟೆಗೂ ಹೆಚ್ಚು ಶ್ರಮ ಪಟ್ಟು ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಮೇವು ತಿನ್ನುತ್ತು ಕೆರೆ ಬಳಿ ಹೋಗಿದ್ದ ಹಸು ನೀರು ಕುಡಿಯಲು ಕೆರೆಯ ಮಣ್ಣಿನಲ್ಲಿ ಸಿಲುಕಿದೆ ಹಳ್ಳದಕೇರಿ ಬಡಾವಣೆ ರೈತ ಶಿವು ಅವರಿಗೆ ಸೇರಿದ್ದ ಹಸು ಇದಾಗಿದ್ದು ಎರಡು ಗಂಟೆಗೂ ಹೆಚ್ಚುಕಾಲ ರಾಡಿಯಲ್ಲೇ ಪರದಾಟ ಪಟ್ಟಿತ್ತು. ಕೆರೆಯಲ್ಲಿ ಸಿಲುಕಿಕೊಂಡು ನರಳಾಟ ಪಡುತ್ತಿತ್ತು. ತಕ್ಷಣ ಸ್ಥಳೀಯರು ನೀಡಿದ ಮಾಹಿತಿ ಮೇರಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಸುವನ್ನು ರಕ್ಷಣೆ ಮಾಡಿದ್ದಾರೆ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *