Breaking News

#Metoo ನಮ್ ಕಾಲದಲ್ಲೇ ಆಗಿ ಹೋಗಿತ್ತು: ನರ್ಸ್ ಜಯಲಕ್ಷ್ಮೀ

ಬೆಂಗಳೂರು: ಜಯಲಕ್ಷ್ಮೀ… ಈ ಹೆಸರು ಕೇಳಿದ ಕೂಡಲೇ ಥಟ್ ಅಂತ ಇವ್ರು ಯಾರು ಅನ್ನೋದು ಗೊತ್ತಾಗುತ್ತೋ ಇಲ್ವೋ. ಆದ್ರೆ ನರ್ಸ್ ಜಯಲಕ್ಷ್ಮೀ, ಬಿಗ್ ಬಾಸ್ ಜಯಲಕ್ಷ್ಮೀ ಅಂದ್ರೆ ಹಂಗೆ ಕಣ್ಮುಂದೆ ಸುಳಿದು ಹೋಗ್ತಾರೆ. ಅರೇ ಆ ಜಯಲಕ್ಷ್ಮೀನಾ, ಇಷ್ಟ್ ದಿನ ಎಲ್ ಇದ್ರು, ಏನ್ ಮಾಡ್ತಾ ಇದ್ರು ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಅದೆಲ್ಲಕ್ಕೂ ಉತ್ತರ ಇಲ್ಲಿದೆ.ಜಯಲಕ್ಷ್ಮೀ ರಾಜಕಾರಣಿಯೊಬ್ಬರ ಜೊತೆಗಿದ್ದ ಫೋಟೋದಿಂದ ಸುದ್ದಿಯಾದವರು. ನಂತರ ಅದೆಲ್ಲಾ ಏನಾಯ್ತು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಆಮೇಲೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಅದಾದ್ಮೇಲೆ ಆ್ಯಕ್ಟಿಂಗ್​ನಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದೂ ಆಗಿದೆ. ರಾಜಕೀಯ ರಂಗಕ್ಕೂ ಎಂಟ್ರಿ ಕೊಟ್ಟು ಬಂದಿದ್ದಾರೆ.ಇದೇ ಜಯಲಕ್ಷ್ಮೀ ಫಸ್ಟ್ ನ್ಯೂಸ್ ಜೊತೆ ಮಾತುಕತೆಗೆ ಸಿಕ್ಕಿದ್ರು. ಅವ್ರ ಮುಂದಿನ ಪ್ರಾಜೆಕ್ಟ್ ಏನು ಅನ್ನೋದರಿಂದ ಹಿಡಿದು ಮೀಟೂ ಅಭಿಯಾನದವರೆಗೂ ತಮ್ಮ ಮನದಾಳದ ಮಾತುಗಳನ್ನ ಅವರ ಟ್ರೇಡ್ ಮಾರ್ಕ್ ಆದ ಅದೇ ನಗು, ಉತ್ಸಾಹದೊಂದಿಗೆ ಹಂಚಿಕೊಂಡಿದ್ದಾರೆ.ಜಯಲಕ್ಷ್ಮೀ ಈಗ ಏನ್ ಮಾಡ್ತಿದ್ದಾರೆ?ಬಿಗ್ ಬಾಸ್ನಿಂದ ಹೊರ ಬಂದ ಮೇಲೆ ಎಲೆಕ್ಷನ್​ಗೆ ನಿಂತಿದ್ದೆ. ಆ್ಯಕ್ಟಿಂಗ್ ಕೂಡ ಮಾಡ್ತಿದ್ದೆ. ಧಾರಾವಾಹಿಯ ಕಮಿಟ್ಮೆಂಟ್ ಮುಗಿತಾ ಬಂದಿದೆ. ಮುಂದೆ ಉದ್ಯಮಿ ಆಗೋ ಕನಸಿನ ಬೆನ್ನು ಹತ್ತಿದ್ದೇನೆ.ಈಗ ಸ್ಯಾಂಡಲ್ ವುಡ್​​ನಲ್ಲಿ ಮೀಟೂ ಸದ್ದು ಜೋರಾಗಿದೆ, ನಿಮ್ಮ ಅಭಿಪ್ರಾಯ ಏನು?Me too ಅಭಿಯಾನದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಅದು ಮಿಸ್ ಯೂಸ್ ಆಗಬಾರದು ಅಷ್ಟೇ. ಆದ್ರೆ ನಾನಿಲ್ಲಿ ಅರ್ಜುನ್ ಸರ್ಜಾ‌ ಪರ ಅಲ್ಲಾ ಅಥವಾ ಶ್ರುತಿಪರ ಅಲ್ಲ. ಪ್ರತಿ ರಂಗದಲ್ಲೂ Me too ಅನ್ನೋದು ಇದ್ದೆ ಇರುತ್ತೆ. ಕೆಲವು relationshipಗಳು ಸುದ್ದಿ ಆಗುತ್ತೆ ಇನ್ನು ಕೆಲವು ಡ್ಯಾಮೇಜ್ ಆಗುತ್ತವೆ ಅಷ್ಟೇ.ಯಾವ ರೀತಿ ಡ್ಯಾಮೇಜ್ ಆಗುತ್ತೆ?ಏನ್‌ ಗೊತ್ತಾರೀ, ಈ Me too ಅಭಿಯಾನ ನನ್ನ ಜೀವನದಲ್ಲಿ ಆಗಿ ಹೋಗಿದೆ. ಅಭಿಯಾನ ಶುರು ಮಾಡಿದ ಹೆಣ್ಣು ಮಗಳನ್ನೇ ಬಿಡಲಿಲ್ಲ. ಇನ್ನು ಉಳಿದವರನ್ನ ಬಿಡ್ತಾರಾ? ಆರೋಪಗಳ ಹಿಂದೆ ಹುನ್ನಾರ ಇರಬಾರದು.ಹುನ್ನಾರನಾ ಅಲ್ವಾ ಅಂತ ಹೇಗೆ ಗೊತ್ತಾಗುತ್ತೆ ?ಇಂತಹ ಪ್ರಕರಣಗಳು ಬೇಗ ಇತ್ಯರ್ಥ ಆಗಬೇಕು ಅಂದ್ರೆ ಮಂಪರು ಪರೀಕ್ಷೆ ಆಗಿಬಿಡಬೇಕು. ಇಲ್ಲಾ ಅಂದ್ರೆ ಜ್ಯೋತಿಷ್ಯ ಕಾರ್ಯಕ್ರಮ ಬರುತ್ತಲ್ವಾ? ಅದು, ಹಿಂದಿನ ಜನ್ಮಕ್ಕೆ ಹೋಗಿ ಏನೇನಾಗಿತ್ತು? ಅಂತ ಪೂರ್ವಜನ್ಮ ತರಹದ ಕಾರ್ಯಕ್ರಮ ಅಲ್ಲಿ ಕೂರಿಸಿ ಸತ್ಯ ಬಾಯಿ ಬಿಡಿಸಬೇಕು. (ನಗುತ್ತಾ..)ಉದ್ಯಮ ಅಂತ ಹೇಳಿದ್ರಿ? ಯಾವ ಬ್ಯುಸಿನೆಸ್ ಮಾಡೋ ಪ್ಲ್ಯಾನ್ ಇದೆ?ಹೋಟೆಲ್ ಉದ್ಯಮದಲ್ಲಿ ಆಸಕ್ತಿ. ಅದಕ್ಕೆ ಕೈ ಹಾಕಿದ್ದೇನೆ. ಸಣ್ಣದೊಂದು ಸಾಹಸ ಮಾಡ್ತಿದ್ದೇನೆ, ನಿಮ್ಮೆಲ್ಲರ ಹಾರೈಕೆ ಇರಲಿ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *