Breaking News

ನೇರೆಪೀಡಿತ ಪ್ರದೇಶಕ್ಕೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭೇಟಿ- ರೈತರ ಅಹವಾಲು ಸ್ವಿಕರಿಸಿದ ಸಚಿವರು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿ ಹಿನ್ನೆಲೆಯಲ್ಲಿ ನೇರಪೀಡಿತ ಪ್ರದೇಶಕ್ಕೆ ಸಕ್ಕರೆ, ಜವಳಿ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

ಕುಂದಗೋಳ ತಾಲೂಕಿನ ಯರಿನಾರಾಯಪುರ ಗ್ರಾಮಕ್ಕೆ ಭೇಟಿ ನೀಡಿ ಬೆಣ್ಣೆ ಹಳ್ಳಿ ಪ್ರವಾಹಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಗ್ರಾಮದ ರೈತರಿಂದ ಅಹವಾಲು ಸ್ವೀಕರಿಸಿದರು.ನಂತರ ಮಾತನಾಡಿದ ಅವರು ಈ ಬಾರಿ ಅನಿರೀಕ್ಷಿತ ಮಳೆಯಿಂದ ತೀವ್ರ ತೊಂದರೆಯಾಗಿದೆ.ಸರಾಸರಿಗಿಂತ ನಾಲ್ಕೈದು ಪಟ್ಟು ಮಳೆಯಾಗಿದೆ. ಹಿಗಾಗಿ ಅಪಾರ ಪ್ರಮಾಣದ

ಮಳೆಯಾಗಿದೆ.ಕೂಡಲೇ ಹಾನಿಯ‌ ಸಮೀಕ್ಷೆಗೆ ಸೂಚಿಸಿದ್ದೆನೆ ಎಂದರು.ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 8 ಕೋಟಿ ರೂ ಬಿಡುಗಡೆ ಮಾಡಿದೆ.ಸದ್ಯ ತುರ್ತು ಪರಿಹಾರ ಕ್ರಮ ಕೈಗೊಳ್ಳಲಾಗತ್ತಿದೆ. ಬೆಳೆ ಪರಿಹಾರ, ಮನೆ ಹಾನಿ ಬಿಡುಗಡೆಗೂ

ಕೂಡ ಕ್ರಮ ಕೈಗೊಳ್ಳಾಗಿದೆ.ಬೆಣ್ಣೆ ಹಳ್ಳದಿಂದ ಆಗೊ ತೊಂದರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಾಗುವುದು ಎಂದರು ಈ ವೇಳೆ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಡಿ.ಸಿ ನಿತೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು..

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *