Breaking News

ಸಿದ್ದರಾಮಯ್ಯ, ಡಿಕೆಶಿ ಅವರನ್ನು ಜೋಡಿಸುವುದರಲ್ಲೇ ರಗಾ ಸುಸ್ತಾಗಿದ್ದಾರೆ : ಬೊಮ್ಮಾಯಿ



ಹೊಸಪೇಟೆ/ಕೊಪ್ಪಳ: ಅಖಂಡ ಭಾರತವನ್ನು ವಿಭಜಿಸಿದ್ದ ಕಾಂಗ್ರೆಸ್​ನಿಂದ ಈಗ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದರಲ್ಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸುಸ್ತಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ನೀತಿಯಿಂದಾಗಿ ದೇಶದ ಪೂರ್ವದಿಂದ ದಕ್ಷಿಣದವರೆಗಿನ 11 ರಾಜ್ಯಗಳಲ್ಲಿ ನಕ್ಸಲೈಟ್​ಗಳು ಹುಟ್ಟಿಕೊಂಡರು. ಖಲಿಸ್ತಾನ್ ಪರಿಕಲ್ಪನೆ ಜನಿಸಿದ್ದು ಕಾಂಗ್ರೆಸ್ ನೀತಿಯಿಂದಾಗಿ ಎಂದು ಆರೋಪಿಸಿದರು. ಕೊಪ್ಪಳದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್​ಗೆ 50 ವರ್ಷ ದಲಿತರ ಕೂಗುಕೇಳಲಿಲ್ಲ. ಮೀಸಲು ಹೆಚ್ಚಳಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅನುಮೋದಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು. ನಾನು ಕನಕನ ನೆಲದಿಂದ ಬಂದವನು. ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ನೀಡಿದ್ದು, ಮಹರ್ಷಿ ವಾಲ್ಮೀಕಿ, ಕನಕದಾಸ ಸರ್ಕಾರಿ ಜಯಂತಿ ಘೊಷಿಸಿದ್ದು ಯಡಿಯೂರಪ್ಪ. ಕಾಂಗ್ರೆಸ್​ನವರು ವಕ್ಪ್ ಆಸ್ತಿ ನುಂಗುವ ಮೂಲಕ ಅಲ್ಪಸಂಖ್ಯಾತರಿಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *