ನಾಗಪುರ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಹಟಮಾರಿ ಧೋರಣೆ ಮುಂದುವರಿಸಿರುವ ಮಹಾರಾಷ್ಟ್ರ ಸರ್ಕಾರ, ಕರ್ನಾಟಕಕ್ಕೆ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಪುನರುಚ್ಚರಿಸಿದೆ ಹಾಗೂ ಈ ಕುರಿತು ಇಂದು(ಮಂಗಳವಾರ) ಗೊತ್ತುವಳಿ ಮಂಡಿಸುವುದಾಗಿ ತಿಳಿಸಿದೆ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ‘ಕರ್ನಾಟಕ ಆಕ್ರಮಿತ ಗಡಿ ಪ್ರದೇಶಗಳನ್ನು’ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಉಭಯ ಸದನಗಳಾದ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸೋಮವಾರ ಗಡಿ ವಿವಾದ ಪ್ರತಿಧ್ವನಿಸಿತು. ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಜಿತ್ ಪವಾರ್, ‘ಗಡಿ ನಿಲುವಳಿಯನ್ನು ಅಧಿವೇಶನದ ಮೊದಲ ವಾರವೇ ತರುವುದಾಗಿ ಹೇಳಿದ್ದಿರಿ. ಆದರೆ 2ನೇ ವಾರ ಬಂದರೂ ನಿಲುವಳಿ ಮಂಡನೆ ಆಗಿಲ್ಲ. ಸೋಮವಾರದ ಕಲಾಪ ಕಾರ್ಯಸೂಚಿಯಲ್ಲೂ ಗಡಿ ನಿಲುವಳಿ ಪಟ್ಟಿ ಆಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news

