ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಸೇರಿದಂತೆ ಧಾರವಾಡ ಜಿಲ್ಲಾದ್ಯಂತ ಮಕ್ಕಳಲ್ಲಿ ಅಪೌಷ್ಟಿಕತೆ ಸೇವೆನೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು 75 ಮಕ್ಕಳಿಗೆ ಅಪೌಷ್ಟಿಕತೆಯಿಂದ ಒಂದೇ ತಿಂಗಳಲ್ಲಿ 20 ಮಕ್ಕಳ ಸಾವನ್ನಪ್ಪಿದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ರಾಮಲಿಂಗಪ್ಪ ಅಂಟರತಾಣಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮಟ್ಟದ ಆಹಾರ ಕೊರತೆ ಮತ್ತು ಕಳಪೆ ಆಹಾರ ಸೇವನೆಯಿಂದ ಜೊತೆಗೆ ಆಹಾರ ಪದ್ಧತಿ ಬದಲಾವಣೆಯಿಂದ ಬಹುತೇಕರಲ್ಲಿ ಅಪೌಷ್ಟಿಕತೆ ಹೆಚ್ಚಳವಾಗಿದ್ದು , ಧಾರವಾಡ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಸುಮಾರು 75 ಮಕ್ಕಳು ಬಳಲುತ್ತಿದ್ದಾರೆ ಸಹಜವಾಗಿಯೇ ಪಾಲಕರಲ್ಲಿ ಆತಂಕಕ್ಕೆ ಸಹ ಕಾರಣವಾಗಿದೆ.
ವಿವಿಧ ಕಾರಣಗಳಿಂದ ಸುಮಾರು 20 ಮಕ್ಕಳು ಅಕ್ಟೋಬರ ಒಂದೇ ತಿಂಗಳಲ್ಲಿ ಮೃತಪಟ್ಟಿದ್ದು , ಈಗ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಸಹ ನಡೆಸಬೇಕಿದೆ. ಮಕ್ಕಳ ಸಾವಿಗೆ ನಿಜವಾಗಿಯೂ ಅಪೌಷ್ಟಿಕತೆ ಆಹಾರ ಸೇವನೆನಾ ಅಥವಾ ವೇಳೆಗೆ ಸರಿಯಾಗಿ ಆಹಾರ ಸೇವೆನೆ ಆಗುತ್ತಿಲ್ಲ ಎಂಬ ಕುರಿತು ಅಧ್ಯಯನ ಸಹ ಅಗತ್ಯವಾಗಿದೆ.ಈಗ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅಪೌಷ್ಠಿಕತೆ ತೊಲಗಿಸಲು ಸರ್ಕಾರ ನಾನಾ ಕಾರ್ಯಕ್ರಮ ಕೈಗೊಂಡಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ.
ಆದ್ರೆ, ಮಗು ಜನಿಸುತ್ತಿದ್ದಂತೆ ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗಿತ್ತಿದ್ದು ಅದಕ್ಕೆ ಹತ್ತಾರು ಕಾರಣ, ಅದನ್ನು ಸಮರ್ಥವಾಗಿ ನಿಭಾಯಿಸುವ ಅವಶ್ಯಕತೆ ಇದೆ ಎನ್ನುವುದು ತಜ್ಞರ ಮಾತು ಇನ್ನೊಂದು ಕಡೆ ಕೇಳಿ ಬರುತ್ತಿದೆ.ಇಂದು ಸೇವಿಸುವ ಆಹಾರ ಪದ್ಧತಿ ಬದಲಾವಣೆ ಆಗಿರುವುದರಿಂದ ಬಹುತೇಕರಲ್ಲಿ ಅಪೌಷ್ಠಿಕತೆ ಹೆಚ್ಚಳವಾಗುತ್ತಲೇ ಇದ್ದು ಅದರಲ್ಲಿಯೂ ಮುಖ್ಯವಾಗಿ ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವಿಸದೇ ಇರುವುದರಿಂದ ಜನಿಸಿದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬದು ಸತ್ಯವಾಗಿದೆ. ಇದನ್ನು ತಡೆಯುವ ಉದ್ದೇಶದಿಂದಲೇ ಅಂಗನವಾಡಿ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಸಹ ಆದ್ರೂ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಬೇಸರದ ಸಂಗತಿ ಜೊತೆಗೆ ಆರೋಗ್ಯ ಇಲಾಖೆ ಎಚ್ಚತ್ತುಕೊಳ್ಳಬೇಕಾಗಿದೆ.
ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲ ಮಕ್ಕಳಿಗೆ ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ ಮತ್ತು ನವಲಗುಂದ, ಅಳ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಇದರಲ್ಲಿ ಕೆಲವು ಗುಣಮುಖರಾಗುತ್ತಿದ್ದಾರೆ.ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 20 ಹಾಸಿಗೆ ವ್ಯವಸ್ಥೆಯ ಪ್ರತ್ಯೇಕ ಕೊಠಡಿ ನಿರ್ಮಿಸಿ ಅಲ್ಲಿಯೇ ಪೌಷ್ಠಿಕ ಆಹಾರ ಸಿದ್ಧಪಡಿಸಿ ವಿತರಣೆ ಮಾಡಲಾಗುತ್ತಿದ್ದು ಎಲ್ಲ ಪೂರಕವಾದ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

