Breaking News

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ ಗೊಬ್ಬರ ರೈತ ಸಂಘದ ಪ್ರತಿಭಟನೆ

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ, ಗೊಬ್ಬರ : ರೈತ ಸಂಘದ ಪ್ರತಿಭಟನೆ

ಗದಗ ಮುಳಗುಂದ: ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಬಂದ್ ಮಾಡಿರುವುದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ಮುಂಗಾರು ಆರಂಭಕ್ಕು ಮುನ್ನ ಕೃಷಿ ಸ್ಥಳೀಯವಾಗಿ ರೈತರಿಗೆ ರಿಯಾಯತಿ ದರದ ಬೀಜ,ಗೊಬ್ಬರ,ಕ್ರಿಮಿನಾಶಕ ಸೇರಿದಂತೆ ಕೃಷಿ ಉಪಕರಣಗಳನ್ನ ವಿತರಣೆ ಮಾಡುತಿತ್ತು, ಆದರೆ ಈ ಬಾರಿ ವಿತರಣೆಗೆ ಸಿದ್ದತೆ ಮಾಡಿಕೊಂಡಿಲ್ಲ, ರೈತರಿಗೂ ಮಾಹಿತಿ ನೀಡದೆ, ರೈತ ಸಂಪರ್ಕ ಕೇಂದ್ರವನ್ನ ಬಂದ್ ಮಾಡಿದೆ. ರೈತರು ಬೀಜ,ಗೊಬ್ಬರ ಸೇರಿದಂತೆ ಕೃಷಿ ವಸ್ತುಗಳನ್ನ ಹುಲಕೋಟಿ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸಬೇಕು. ಎಂದು ಕೃಷಿ ಇಲಾಖೆ ಈಗ ತಿಳಿಸಿದೆ. ಇದರಿಂದ ಪಟ್ಟಣ ಸೇರಿದಂತೆ ಚಿಂಚಲಿ, ನೀಲಗುಂದ, ಕಲ್ಲೂರ, ನೀಲಗುಂದ, ಸೀತಾಲಹರಿ, ಬಸಾಪೂರ, ಕಣವಿ ಹೊಸೂರು, ಹರ್ತಿ, ಶಿರುಂಜ ಯಲಿಶಿರುಂಜ, ಶಿರೋಳ ರೈತರಿಗೆ ತೊಂದರೆಯಾಗುತ್ತಿದೆ. ಹತ್ತಾರು ವರ್ಷಗಳಿಂದ ರೈತರಿಗೆ ಅನುಕೂಲವಾಗಿದ್ದ ಇಲ್ಲಿನ ಕೇಂದ್ರವನ್ನ ಬಂದ್ ಮಾಡಿದ್ದು ಸರಿಯಲ್ಲ ಎಂದು ಕೃಷಿ ಇಲಾಖೆ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಳಗುಂದ ದಿಂದ ಹುಲಕೋಟಿಗೆ ನೇರ ಸಾರಿಗೆ ಸಂಪರ್ಕ ಇಲ್ಲಾ, ಗದಗ ಬಳಸಿಯೆ ಸುಮಾರು 30 ಕಿ.ಮೀ ಹೋಗುವದು ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ, ಏಕಾ ಏಕಿ ಕೇಂದ್ರವನ್ನ ಬಂದ್ ಮಾಡಿದ್ದು, ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ. ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಿದ್ದು, ಇನ್ನೆರಡು ದಿನದಲ್ಲಿ ಮತ್ತೆ ಇಲ್ಲಿನ ಕೇಂದ್ರವನ್ನ ತೆರೆಯದೆ ಇದ್ದಲ್ಲಿ ಕೃಷಿ ಇಲಾಖೆ ವಿರುದ್ದ ರಸ್ತೆ ತಡೆದು ಪ್ರತಿಭಟನೆ ಮಾಡಲಾವುವದು. ಎಂದು ರೈತ ಸಂಘದ ಕಾರ್ಯದರ್ಶಿ ದೇವರಾಜ ಸಂಗನಪೇಟಿ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಕಿರಣ ಕುಲಕರ್ಣಿ, ದೇವರಾಜ ಸಂಗನಪೇಟಿ, ಮಂಜುನಾಥ ಕಬಾಡಿ, ಚಂದ್ರಣ್ಣ ಬಟ್ಟೂರ, ಮಹಮ್ಮದಲಿ ಶೇಖ, ಮಹಾಂತಪ್ಪ ಮಟ್ಟಿ, ಹುಚ್ಚೀರಪ್ಪ ಹುಡೇದ, ಮಹಾಂತೇಶ ಕೆಂಚನಾಯ್ಕರ ಇತರರು ಇದ್ದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *