Breaking News

ವೀಡಿಯೊ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ:ಪ್ರಮೋದ್ ಮುತಾಲಿಕ್

ಧಾರವಾಡ: ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ವೀಡಿಯೊ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜುಲೈ 20ರಂದು ಉಡುಪಿಯಲ್ಲಿ ಅತ್ಯಂತ ಹೇಯ ಕೃತ್ಯ ನಡೆದಿದೆ. ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೂವರು ವಿದ್ಯಾರ್ಥಿನಿಯರು ಮೊಬೈಲ್ ಇಟ್ಟು ವೀಡಿಯೊ ಮಾಡಿದ ಘಟನೆ ನಡೆದಿದೆ. ಅವರ ಮೇಲೆ ಕ್ರಮ ಆಗಬೇಕಿತ್ತು.

ಒಂದು ವಾರದ ನಂತರ ಈ ಬಗ್ಗೆ ದೂರು ದಾಖಲು ಮಾಡುತ್ತಾರೆ. ಗೃಹ ಸಚಿವರು ಇದನ್ನು ಸಣ್ಣ ವಿಷಯ ಎಂದು ಹೇಳುತ್ತಾರೆ. ಅವರ ಈ ಹೇಳಿಕೆ ನೋಡಿದರೆ ಉಡುಪಿ ಎಸ್‌ಪಿಯವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂಬಂತಿದೆ ಎಂದಿದ್ದಾರೆ.ಗೃಹ ಮಂತ್ರಿಗಳೇ, ನಿಮ್ಮ ಮಗಳೇ ಆ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂದು ತಿಳಿಯಿರಿ. ಈ ರೀತಿ ಅಶ್ಲೀಲ ಪ್ರಕ್ರಿಯೆ ಏನಾದರೂ ನಡೆದಿದ್ದರೆ ನೀವು ಬಹಳ ಹಗುರಾಗಿ ಮಾತನಾಡುತ್ತಿದ್ದೀರಾ? ಇದು ಕೇವಲ ವೀಡಿಯೊ ಎಂದಲ್ಲ, ಇದರ ಹಿಂದೆ ದೊಡ್ಡ ಜಾಲವೇ ಇರಬಹುದು.

ಇದು ಕೇರಳ, ಅಫಘಾನಿಸ್ತಾನ್, ಅರಬ್ ರಾಷ್ಟ್ರಗಳಿಗೆ ಫೋಟೋ ಕಳುಹಿಸುತ್ತಿರಬಹುದು. ಇದನ್ನು ತನಿಖೆ ಮಾಡಬೇಕು. ಮುಸ್ಲಿಂ ಯುವಕರಿಗೆ ಇದನ್ನು ಕಳುಹಿಸುತ್ತಿರಬಹುದು. ಇದು ಸಣ್ಣ ವಿಷಯ ಎಂದು ಹೇಳುವ ಗೃಹ ಮಂತ್ರಿಗೆ ಶೋಭೆ ತರುವಂತದ್ದಲ್ಲ. ಆ ಕಾಲೇಜ್‌ನಲ್ಲಿ ಇರುವ ಪ್ರಾಂಶುಪಾಲ ಇದುವರೆಗೂ ದೂರು ಕೊಟ್ಟಿಲ್ಲ ಏಕೆ? ಮುಸ್ಲಿಂ ಯುವಕ- ಯುವತಿಯರು ಅಂತಾ ಬಚಾವ್ ಮಾಡಲು ಈ ರೀತಿ ಮುಚ್ಚಿಡುವ ಕೆಲಸ ನಡೆದಿದೆಯಾ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.ಪೊಲೀಸರೂ ಬಣ್ಣ ಬದಲಾಯಿಸುತ್ತಿದ್ದಾರೆ. ಅಧಿಕಾರದಲ್ಲಿರುವವರ ಪ್ರಕಾರ ನಡೆದುಕೊಳ್ಳುವ ಪ್ರಕ್ರಿಯೆ ನಡೆದಿದೆ. ಪೊಲೀಸ್ ಇಲಾಖೆಗೆ ನಾಚಿಕೆಯಾಗಬೇಕು. ನ್ಯಾಯ ನ್ಯಾಯಾನೇ, ಕಾಯ್ದೆ ಕಾಯ್ದೆನೇ. ಕಾನೂನು ಎಲ್ಲರಿಗೂ ಒಂದೇ. ಬಿಜೆಪಿ ಬಂದಾಗ ಒಂದು, ಕಾಂಗ್ರೆಸ್ ಬಂದಾಗ ಒಂದು ಅಂತಾ ಬಣ್ಣ ಬದಲಿಸಬಾರದು.

ಕಾನೂನು ಪ್ರಕಾರ ನಡೆದುಕೊಂಡರೆ ನಿಮ್ಮ ಮೇಲೆ ನಂಬಿಕೆ ಬರುತ್ತೆ. ಈ ರೀತಿ ನಡೆದ ಘಟನೆಯನ್ನು ಶ್ರೀರಾಮಸೇನೆ ಖಂಡಿಸುತ್ತೆ. ಇಡೀ ರಾಜ್ಯಾದ್ಯಂತ ಇದರ ಬಗ್ಗೆ ಹೋರಾಟ ಹಾಕಿಕೊಳ್ಳುತ್ತೇವೆ. ರಾಜಕಾರಣ ಮಾಡಬೇಡಿ ಎಂದು ಹೇಳುವವರಿಗೆ ಇದು ರಾಜಕಾರಣ ಅಲ್ಲ ಎಂದು ಹೇಳುತ್ತೇನೆ. ಇದು ಹೇಯ ಕೃತ್ಯ. ಇದನ್ನ ತಡೆಯಬೇಕು ಹಾಗೂ ಇದರ ಹಿಂದೆ ಯಾರಿದ್ದಾರೋ ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಉಡುಪಿ ಹಿಜಾಬ್‌ನಲ್ಲಿ ಮುಸ್ಲಿಂ ಮೌಲ್ವಿ ಹಾಗೂ ಪಿಎಫ್‌ಐಗೆ ಮುಖಭಂಗ ಆಗಿದೆ. ಹೈಕೋರ್ಟ್‌ ಆದೇಶ ಬಂತು.
ಅದರ ಸೇಡು ತೀರಿಸಿಕೊಳ್ಳಲು ಇವತ್ತು ಹಿಂದೂ ಹುಡುಗಿಯರ ಈ ಅಶ್ಲೀಲ ಚಿತ್ರಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿರಬಹುದು. ಎಲ್ಲ ಪ್ರಕಾರದ ತನಿಖೆ ಇದರಲ್ಲಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *