Breaking News

ಧಾರವಾಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದವರೆಷ್ಟು ಗೊತ್ತಾ?

ಧಾರವಾಡ : ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಧಾರವಾಡ ಗ್ರಾಮೀಣದಲ್ಲಿ 83, ಧಾರವಾಡ ನಗರದಲ್ಲಿ 12, ಹುಬ್ಬಳ್ಳಿ ಗ್ರಾಮೀಣದಲ್ಲಿ 60, ಹುಬ್ಬಳ್ಳಿ ನಗರದಲ್ಲಿ 28, ಕುಂದಗೋಳದಲ್ಲಿ 61, ಕಲಘಟಗಿಯಲ್ಲಿ 61, ನವಲಗುಂದದಲ್ಲಿ 38, ಅಣ್ಣಿಗೇರಿಯಲ್ಲಿ 27, ಅಳ್ಳಾವರದಲ್ಲಿ 10, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ್ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳು ಮತ್ತು ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ತಾತ್ಕಾಲಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯ ಒಟ್ಟು 4,16,582 ಫಲಾನುಭವಿಗಳ ಪೈಕಿ ಜುಲೈ 31ರವರೆಗೆ 2,52,280 ಫಲಾನುಭವಿಗಳು ತಮ್ಮ ವಿವರಗಳನ್ನು ನೋಂದಣಿ ಮಾಡಿಸಿದ್ದಾರೆ. ಉಳಿದ 1,64,302 ಫಲಾನುಭವಿಗಳ ವಿವರಗಳನ್ನು ನೋಂದಣಿ ಮಾಡಲು ಬಾಕಿ ಇದೆ. ಈ ಯೋಜನೆಯ ಲಾಭವನ್ನು ಪಡೆಯಲು ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರು ಹೊರತುಪಡಿಸಿ ಉಳಿದ ಎಲ್ಲ ಪಡಿತರ ಚೀಟಿಯ ಮಹಿಳಾ ಮುಖ್ಯಸ್ಥರು ಅರ್ಹರಿರುತ್ತಾರೆ.

ಕಾರಣ ಫಲಾನುಭವಿಗಳು ಕೂಡಲೇ ತಮ್ಮ ಚಾಲಿತ ಪಡಿತರ ಚೀಟಿ, ಆಧಾರ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ದೊಂದಿಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಸಮೀಪದ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Share News

About bigtvnews22

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *