Breaking News

ರಾಜ್ಯದ ಮೊದಲ ಮಹಿಳಾ ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ ಮಾಡಿದರು. ಹು-ಧಾ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ, ಪೊಲೀಸ್ ಕಮೀಷನರೇಟ್ ವತಿಯಿಂದ ಗೌರವ ವಂದನೆ ಮಾಡಿಕೊಂಡರು.

ಇನ್ನು, ರೇಣುಕಾ ಸುಕುಮಾರ ರಾಜ್ಯದಲ್ಲಿಯೇ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಆದೇಶದಂತೆ ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಈಗ ಅಧಿಕಾರ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಟ್ರಾಫಿಕ್ ಡಿಸಿಪಿ ಗೋಪಾಲಕೃಷ್ಣ ಬ್ಯಾಕೊಡ್, ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ಎಮ್, ಎಸಿಪಿ ವಿನೋದ ಮುಕ್ತದಾರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆದರದಿಂದ ನೂತನ ಪೊಲೀಸ್ ಕಮೀಷನರ್‌ರನ್ನು ಬರಮಾಡಿಕೊಂಡರು.

Share News

About Shaikh BigTv

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *