ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ವಿಭಜನೆಯ ಕರಾಳ ನೆನಪಿನ ದಿನವಾದ ಇಂದು ಆ ಅವಧಿಯಲ್ಲಿ ಜನರು ಅನುಭವಿಸಿದ ನೋವುಗಳನ್ನು ಸ್ಮರಿಸಿದರು. ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು
ದೇಶ ವಿಭಜನೆಯಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರನ್ನು ಪೂಜ್ಯಭಾವದಿಂದ ಸ್ಮರಿಸುವ ಸಂದರ್ಭವೇ ’ವಿಭಜನೆಯ ಸಂಸ್ಮರಣಾ ದಿನ’ವಾಗಿದೆ. ಇದರೊಂದಿಗೆ, ಈ ದಿನ ಸ್ಥಳಾಂತರದ ಭಾರವನ್ನು ಹೊರಲು ಒತ್ತಾಯಿಸಲ್ಪಟ್ಟವರ ನೋವು ಮತ್ತು ಹೋರಾಟವನ್ನು ನಮಗೆ ನೆನಪಿಸುತ್ತದೆ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ” ಎಂದು ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





