Breaking News

ಜನರಿಗೆ ಹರ್ಷ ತಂದ ಸಾರಿಗೆ ಇಲಾಖೆಯ ಟೂರ್ ಪ್ಯಾಕೇಜ್……

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಪ್ಯಾಕೇಜ್ ಟೂರಿಗೆ ಜನರು ಫಿದಾ ಆಗಿದ್ದಾರೆ. ಹುಬ್ಬಳ್ಳಿಯಿಂದ ಜೋಗಕ್ಕೆ ಬಿಡಲಾದ ವಿಶೇಷ ಬಸ್ ಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವೋಲ್ವೋ ಮತ್ತು ರಾಜಹಾಂಸ ಬಸ್ ಗಳನ್ನು ಬಿಟ್ಟ ನಿಗಮ.. ಎರಡನೆಯ ಶನಿವಾರ ಮತ್ತು ಪ್ರತಿ ರವಿವಾರ, ರಜಾ ದಿನಗಳಲ್ಲಿ ವಿಶೇಷ ಬಸ್ ವೆವಸ್ಥೆ ಮಾಡಲಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿರೋ ಜೋಗ ಜಲಪಾತ.

ಜಲಪಾತ ವೀಕ್ಷಣೆಗೆ ರಾಜ್ಯ ಸೇರಿ ದೇಶದ ವಿವಿಧೇಡೆಯಿಂದ ಬರುತ್ತಿರುವ ಜನ ಸಾಗರ ಹಾಗೆ ವಾಣಿಜ್ಯ ನಗರದಿಂದಲೂ ಜೋಗ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಜನರ ಸ್ಪಂದನೆ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್ ಗಳ ಸಂಖ್ಯೆ ಯನ್ನು ಹೆಚ್ಚು ಮಾಡಲಾಗಿದೆ. ಮೊದಲು ಒಂದು ವೋಲ್ವೋ ಮತ್ತು ಒಂದು ರಾಜಾಹಂಸ ಬಿಡಲಾಗುತ್ತಿತ್ತು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ವೋಲ್ವೋ ಮತ್ತು ಎರಡು ರಾಜಹಂಸ ಬಸ್ ವ್ಯೆವಸ್ಥೆ ಮಾಡಲಾಗಿದೆ.ಜೋಗಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಶಿರಿಸಿ ಮಾರಿಕಾಂಬ ದರ್ಶನ ಮಾಡಿ ಜೋಗ ಜಲಪಾತ ವೀಕ್ಷಣೆ ಮಾಡಿಕೊಂಡು ಬರಲು ಮೂರು ತಾಸುಗಳ ಅವಕಾಶ ಇದೆ. ಒಂದೇ ದಿನದಲ್ಲಿ ಜೋಗ ವೀಕ್ಷಣೆ ಮಾಡಿಕೊಂಡು ವಾಪಾಸ್ ಆಗಲು ಅವಕಾಶ ಮಾಡಿಕ್ಕೋಟ್ಟಿದೆ.

ವಾಯುವ್ಯ ಸಾರಿಗೆ ವಿಶೇಷ ಪ್ಯಾಕೇಜ್ ಗೆ ಜನ ಪುಲ್ ಖುಷ್, ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥೆಗೆ ಜನತೆ ಹರ್ಷ. ನಾವಾಗಿಯೇ ವಾಹನ ತರಬೇಕೆಂದ್ರೆ ತುಂಬಾ ದುಬಾರಿ ಆಗುತ್ತೆ, ಮತ್ತು ಹೆಚ್ಚು ಹಣ ಕೊಡಬೇಕಾಗುತ್ತೆ ಇದು ಜನ ಸಾಮಾನ್ಯರಿಗೆ ಕಷ್ಟ ಆಗುತ್ತೆ ಆದರೆ ಕೇವಲ 600ರೂಪಾಯಿಯಲ್ಲಿ ಹೋಗಿ ಬರುತ್ತಿರುವುದು ಇದರಿಂದ ಟ್ರಿಪ್ ಎಂಜಾಯ್ ಮಾಡಬಹುದು, ಊಟ ಸವಿದು ಸಂಜೆಗೆಲ್ಲ ವಾಪಾಸ್ ಆಗಬಹುದು ಇಂತದೊಂದು ಪ್ಯಾಕೇಜ್ ಟ್ರಿಪ್ ಮಾಡಿದಕ್ಕೆ ಸಾರಿಗೆ ಇಲಾಖೆಗೆ ಧನ್ಯವಾದಗಳು ಅಂತಿದಾರೆ ಜನ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *