ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋದ ಗ್ರೂಪ್ ಎ ಕ್ವಾಲಿಫೈಯರ್‌ನಲ್ಲಿ ಭಾರತದ ‘ಗೋಲ್ಡನ್ ಬಾಯ್’ ಖ್ಯಾತಿಯ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರ ಜೊತೆಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಸಾಧಿಸಿದರು. ಈ ಕ್ರೀಡಾಕೂಟ ಆಗಸ್ಟ್ 19 ರಿಂದ ಪಾರಂಭವಾಗಿದ್ದು 27 ರವರೆಗೆ ನಡೆಯಲಿದೆ.
ಪುರುಷರ ಜಾವೆಲಿನ್ ಥ್ರೋದಲ್ಲಿ ಅರ್ಹತೆಗೆ 83 ಮೀಟರ್ ದೂರ ಜಾವೆಲಿನ್ ಎಸೆಯಬೇಕಿತ್ತು. ನೀರಜ್ ತಮ್ಮ ಮೊಲದ ಪ್ರಯತ್ನದಲ್ಲೇ 88.77 ಮೀ ದೂರಕ್ಕೆಸೆದು ಎರಡು ಟೂರ್ನಿಗಳಿಗೂ ಅರ್ಹತೆ ಪಡೆದುಕೊಂಡಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ, ಡೈಮಂಡ್ ಲೀಗ್ ಚಾಂಪಿಯನ್ ಕೂಡಾ ಹೌದು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದರಲ್ಲಿ ಎಡವಿದ್ದ ಚೋಪ್ರಾ ಬೆಳ್ಳಿ ಪದಕ ಪಡೆದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





