Breaking News

ನೈರುತ್ಯ ರೈಲ್ವೆಯು ಏಪ್ರಿಲ್ – ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ…

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಏಪ್ರಿಲ್ – ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದೆ.‌ ನೈರುತ್ಯ ರೈಲ್ವೆಯು 19.27 ದಶಲಕ್ಷ ಟನ್ ಸರಕುಗಳನ್ನು ಲೋಡ್ ಮಾಡಿ ರೂ. 1,909.77 ಕೋಟಿ ಆದಾಯ ಗಳಿಸಿದೆ. ಇದಲ್ಲದೆ 8.27 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 37.6 ರಷ್ಟು ಹೆಚ್ಚಾಗಿದೆ.

ಇದರ ಜೊತೆಗೆ ನ 270 ಆಟೋಮೊಬೈಲ್ ರೇಕ್​ಗಳನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 52.5 ರಷ್ಟು ಹೆಚ್ಚಾಗಿದೆ. ನೈರುತ್ಯ ರೈಲ್ವೆ ಒಂದು ದಿನಕ್ಕೆ ಸರಾಸರಿ 1,991 ವ್ಯಾಗನ್​ಗಳನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 8 ರಷ್ಟು ಹೆಚ್ಚಾಗಿದೆ. ನೈರುತ್ಯ ರೈಲ್ವೆ ಈ ಹಣಕಾಸು ವರ್ಷದ ಆಗಸ್ಟ್ ವರೆಗೆ 19.27 ಮಿಲಿಯನ್ ಟನ್ ಸರಕು ಸಾಗಣೆ ದಾಖಲಿಸಿದೆ. ಇದು ಕಳೆದ ವರ್ಷದ ಲೋಡಿಂಗ್ ಅವಧಿಗೆ ಹೋಲಿಸಿದರೆ ಸುಮಾರು ಶೇ.9.4 ರಷ್ಟು ಹೆಚ್ಚಾಗಿದೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *