ಲಿಂಗಾಯತ ಕಡೆಗಣನೆ ಬಗ್ಗೆ ಶಾಮನೂರ ಹೇಳಿಕೆ ವಿಚಾರ ಅತ್ಯಂತ ಗಂಭೀರ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಇದೊಂದು ಬಹಳ ಗಂಭೀರ ವಿಷಯ ಆಗಿದ್ದು. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ಅತ್ಯಂತ ಹಿರಿಯ ಮುಖಂಡರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು. ಅವರ ಮಗ ಮಂತ್ರಿ ಸಹ ಇದ್ದಾರೆಇವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲಾ ಸಮಾಜಕ್ಕೂ ಸರಿಯಾದ ಜವಾಬ್ದಾರಿ ಕೆಲಸ ಕೊಡುತ್ತಿಲ್ಲ. ಕೆಲವೇ ಕೆಲವು ಆಫೀಸರ್ ಗಳಿಗೆ ಉತ್ತಮವಾದ ಪೋಸ್ಟಿಂಗ್ ಕೊಡುತ್ತಿದ್ದಾರೆ ಡಿಸಿಷನ್ ಮಾಡುವ ಪೋಸ್ಟಿಂಗ್ ಗಳನ್ನ ಕೆಲವೇ ಸಮಾಜಕ್ಕೆ ಕೊಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





