ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಅವಿನಾಶ್ ಸಬ್ಲೆ ಚಿನ್ನದ ಪದಕ ಗೆದ್ದಿದ್ದಾರೆ.ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಅವನಾಶ್ ಸಬ್ಲೆ ಸ್ವರ್ಣ ಗೆದ್ದು ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್ನಲ್ಲಿ ಭಾರತ ತಂಡವು ಎರಡು ಚಿನ್ನದ ಪದಕದ ಖಾತೆ ತೆರೆದಿದೆ.
ಸ್ಟೀಪಲ್ ಚೇಸ್ ಓಟದಲ್ಲಿ ಭಾರತ ಚಿನ್ನ ಗೆದ್ದಿರುವುದು ಇದೇ ಮೊದಲು. ಸ್ಟೀಪಲ್‌ಚೇಸ್‌ನಲ್ಲಿ ಕೇವಲ 8 ನಿಮಿಷ 11.20 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಅವಿನಾಶ್ ಸೆಬ್ಲೆ ದಾಖಲೆ ಬರೆದಿದ್ದಾರೆ. ಈ ಮೂಲಕ ಜಪಾನ್‌ನ ಮಿಯುರಾ ರ್ಯುಜಿ (8:09.91) ನಂತರ ಏಷ್ಯಾದ ಎರಡನೇ ವೇಗದ ಸ್ಟೀಪಲ್ಚೇಸ್ ರೇಸರ್ ಎನಿಸಿಕೊಂಡಿದ್ದಾರೆ.
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವಿನಾಶ್, ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಲ್ಲದೆ, 2018ರಲ್ಲಿ ಹೊಸೈನ್ ಖೇನಿಯಾ ಅವರ 8:22:79ರ ದಾಳಕೆಯನ್ನು ಅವಿನಾಶ್ ಮುರಿದಿದ್ದಾರೆ. ಇನ್ನೂ ಪುರುಷರ ಶಾರ್ಟ್ಪುಟ್ನಲ್ಲಿ ಸಜೀಂದರ್ ಪಾಲ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





