ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಮಾರಕಾಸ್ತ್ರಗಳು ಮತ್ತೆ ಝಳಪಿಸಿವೆ. ಎಲೆಕ್ನಿಕ್ ಬಿಲ್ ಕಲೆಕ್ಟರ್ ಒಬ್ಬರನ್ನು ಧಾರವಾಡ ಹೊರವಲಯದ ಹಳಿಯಾಳ ಬೈಪಾಸ್‌ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಾಡ ಗ್ರಾಮದ ರಜಾಕ್ ಕವಲಗೇರಿ ಎಂಬಾತನೇ ಹತ್ಯೆಗೀಡಾದವನು.
ಬೈಕ್ ಮೇಲೆ ಹೊರಟಿದ್ದ ರಜಾಕ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಳಿಯಾಳ ಬೈಪಾಸ್ ಬಳಿ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಕೊಲೆ ಮಾಡಿದವರು ಯಾರು? ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





