Breaking News

ಕಾಂಗ್ರೆಸ್ ಸರ್ಕಾರ ಜನರ ನೋವನ್ನು ಕಡೆಗಣಿಸುತ್ತಿದೆ :ಸಿ ಟಿ ರವಿ..

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ರೋಮ್ ಹತ್ತಿ ಉರಿಯುತಿದ್ದರೆ ನಿರೋ ಪಿಟೀಲು ಬಾರಿಸುತ್ತಿದ್ದ” ಎಂಬಂತೆ ರಾಜ್ಯ ಬರದ ಬೇಗುದಿಯಲ್ಲಿ ನರಳುತ್ತಿದ್ದರೆ ರಾಜ್ಯದ ಕಾಂಗ್ರೆಸ್ ಸರ್ಕಾರ “ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ” ಆಟ ಆಡಿ ಜನರ ನೋವನ್ನು ಕಡೆಗಣಿಸುತ್ತಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಿ ಟಿ ರವಿ ಅವರು, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆತರು ಜನರ ಬವಣೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕ ಬಿಜೆಪಿ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಈ ನಿಟ್ಟಿನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಇಂದು ರಾಜ್ಯ ಬಿಜೆಪಿ ತಂಡದ ನೇತೃತ್ವವಹಿಸಿ ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿ, ರೈತರನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಕೋಲಾರ ಸಂಸದ ಶ್ರೀ ಎಸ್. ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪ, ಕೋಲಾರ ಜಿಲ್ಲಾಧ್ಯಕ್ಷರಾದ ಡಾ.ವೇಣುಗೋಪಾಲ್, ಉಭಯ ಜಿಲ್ಲೆಗಳ ಪಧಾದಿಕಾರಿಗಳು, ಮಾಜಿ ಶಾಸಕರುಗಳು, ತಾಲ್ಲೂಕು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Share News

About BigTv News

Check Also

ಸಚಿವ ಸಂಪುಟ ವಿಸ್ತರಣೆ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಸಿಗುತ್ತೆ ಮಂತ್ರಿಗಿರಿ ಭಾಗ್ಯ…?

ಸಚಿವ ಸಂಪುಟ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಮಂತ್ರಿಗಿರಿ ಲಕ್..? 20 ಸ್ಥಾನಗಳಿಗೆ 50+ ಆಕಾಂಕ್ಷಿಗಳು: ಕಾಂಗ್ರೆಸ್‌ನಲ್ಲಿ …

Leave a Reply

Your email address will not be published. Required fields are marked *