Breaking News

4 ವರ್ಷದ ಬಾಲಕಿಯ ಮೇಲೆ ಎಸ್‌ಐ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸ್ ಠಾಣೆಯ ಹೊರಗೆ ಬೃಹತ್ ಪ್ರತಿಭಟನೆ….

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಎಸ್‌ಐ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸ್ ಠಾಣೆಯ ಹೊರಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜನರು ಆತನನ್ನು ಹಿಡಿದು ಥಳಿಸಿದರು. ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯ ಬಳಿಕ ಬಂದ ಗ್ರಾಮಸ್ಥರು, ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಸಬ್ ಇನ್ಸ್‌ಪೆಕ್ಟರ್‌ಗೆ ಥಳಿಸಿದರು.ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಭೂಪೇಂದ್ರ ಸಿಂಗ್ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಜರಂಗ್ ಸಿಂಗ್ ತಿಳಿಸಿದ್ದಾರೆ.

Share News

About BigTv News

Check Also

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್​ …

Leave a Reply

Your email address will not be published. Required fields are marked *