Breaking News

ಐತಿಹಾಸಿಕ ಕ್ರೀಡೆಗೆ ಚಾಲನೆ ನೀಡಿದ ನಾಗರಾಜ್ ಗೌರಿ

ಬೈಕ್ ಜೊತೆ ಎಮ್ಮೆ ಓಟ: ಧಾರವಾಡದಲ್ಲಿ ಗಮನಸೆಳೆದ ಕ್ರೀಡಾಕೂಟ: ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಚಾಲನೆ .

ಧಾರವಾಡ: ಧಾರವಾಡದ ಗೌಳಿ ಸಮುದಾಯ ಪ್ರತಿವರ್ಷ ವಿಶಿಷ್ಟವಾಗಿ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳುತ್ತ ಬಂದಿದೆ. ಈ ವರ್ಷ ಕೂಡ ಧಾರವಾಡದ ಹನುಮಂತ ನಗರದಲ್ಲಿ ಬೈಕ್ ಜೊತೆ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಚಾಲನೆ ನೀಡಿದರು.

ಬೈಕ್‌ಗೆ ಎಮ್ಮೆಯನ್ನು ಬೆನ್ನಟ್ಟಿಸಿಕೊಂಡು ಹೋಗಿ ಎಲ್ಲಿಯವರೆಗೆ ಎಮ್ಮೆ ಓಡುತ್ತದೆಯೋ ಅಲ್ಲಿಯವರೆಗೂ ಅದನ್ನು ಓಡಿಸುವ ಮೂಲಕ ಎಮ್ಮೆಯ ಸಾಮರ್ಥ್ಯ ಗುರುತಿಸಲಾಗುತ್ತದೆ.

ಧಾರವಾಡದ ಗೌಳಿ ಸಮುದಾಯದ ಜನ ಪ್ರತಿವರ್ಷ ಈ ರೀತಿಯ ಸ್ಪರ್ಧೆ ಆಯೋಜಿಸುತ್ತ ಬಂದಿದ್ದು, ಈ ವರ್ಷ ಕೂಡ ಸ್ಪರ್ಧೆ ಆಯೋಜನೆ ಮಾಡಿದ್ದರು. ಈ ಸ್ಪರ್ಧೆಗೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಗೌಳಿ ಸಮುದಾಯದ ಜನ ಪ್ರತಿವರ್ಷ ಮನರಂಜನೆ ಸ್ಪರ್ಧೆಯಾಗಿ ಈ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜನೆ ಮಾಡುತ್ತ ಬಂದಿದ್ದಾರೆ. ಗೌಳಿ ಸಮುದಾಯದ ಜನರಿಗೆ ಸಮುದಾಯ ಭವನ ಹಾಗೂ ಆಶ್ರಯ ಮನೆಗಳನ್ನು ನಿರ್ಮಿಸುವ ಸಲುವಾಗಿ ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗೌಳಿ ಸಮುದಾಯದ ಬುರಾನ್ ಗೌಳಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share News

About Malik Belagali

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *