Breaking News

ಶಿವಾಜಿನಗರದಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು ಶಾಲಾ ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ….

ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು ಶಾಲಾ ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ಮೂರು ಗಂಟೆ ಸುಮಾರಿಗೆ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. ಶಿವಾಜಿನಗರದಲ್ಲಿ 80 ಮಕ್ಕಳು ಓದುತ್ತಿದ್ದ ಬಿಬಿಎಂಪಿ ಇಂಗ್ಲಿಷ್ ನರ್ಸರಿ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. 75 ವರ್ಷ ಹಳೆಯದಾದ ಈ ಶಾಲೆಯಲ್ಲಿ 80 ಮಕ್ಕಳು ಓದುತ್ತಿದ್ದಾರೆ. ನಿತ್ಯ ಶಾಲೆಗೆ 75 ಮಕ್ಕಳು ಬರುತ್ತಾರೆ. ಇಂದು ಬೆಳಗಿನ ಜಾವ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಮಕ್ಕಳು ಶಾಲೆಯಲ್ಲಿ ಇರಲಿಲ್ಲ.

ಬೆಳಿಗಿನ ಜಾವ ಈ ಘಟನೆ ನಡೆದಿದ್ದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ. ಕಳೆದ ಶನಿವಾರ ಈ ಶಾಲೆಗೆ ಮಕ್ಕಳು ಆಗಮಿಸಿದ್ದರು. ಇಂದೂ ಕೂಡ ಮಕ್ಕಳು ಶಾಲೆಗೆ ಬರಬೇಕಾಗಿತ್ತು. ಅಷ್ಟರಲ್ಲಾಗಲೇ ಶಾಲೆಯ ಕಟ್ಟಡ ಕುಸಿದು ದೊಡ್ಡ ದುರಂತ ತಪ್ಪಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಸಿಬ್ಬಂದಿಗಳು ಯಾರೂ ಕೂಡ ಶಾಲೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *