Breaking News

ಲೋಕಸಭೆ ಟಿಕೆಟ್ ಮೇಲೆ ಶೆಟ್ಟರ್ ಕುಟುಂಬದ ಕಣ್ಣು:ಪಕ್ಷ ಯಾವುದಾದರೂ ಓಕೆ.?

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಳೆದ ದಿನ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಮತ್ತೆ ತಮ್ಮ ವಿರೋಧಿ ಗುಂಪಿನ ಮೇಲೆ ಮಾತಿನ ಚಾಟಿ ಬೀಸಿದ್ದಾರೆ.ಒಂದು ಕಡೆ ನಾಡ ದೊರೆ ಸಿದ್ದರಾಮಯ್ಯ ಅವರನ್ನು ಮನೆಗೆ ಕರೆಯಿಸಿ ಶಕ್ತಿ ಪ್ರದರ್ಶನ ನಡೆಸಿದರೆ ಮತ್ತೊಂದು ಕಡೆ ಖಾವಿದಾರಿಗಳ ಆಶೀರ್ವಾದ ಪಡೆದು ವೀರಶೈವ ಲಿಂಗಾಯತ ಕಾರ್ಡ್ ಮತ್ತೊಮ್ಮೆ ಚುನಾವಣೆ ಅಂಗಳಕ್ಕೆ ಬಿಡಲು ಸಜ್ಜಾಗಿದ್ದಾರೆ.

ಲೋಕಸಭೆ ಚುನಾವಣೆಗೆ ಶೆಟ್ಟರ್ ಸ್ಪರ್ದೆ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ತಡವಾಗಿ ಉತ್ತರಿಸುತ್ತಿದ್ದರು ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ತಮಗೆ ದಕ್ಕೆ ಬರಬಾರದು ಎಂದು ಮದ್ಯೆ ಪ್ರವೇಶಿಸಿ ನಾನು ಟಿಕೆಟ್ ಆಕಾಂಕ್ಷಿ ಅಲ್ಲಾ ಎಂದು ಮಾದ್ಯಮದ ಮುಂದೆ ಸ್ಟೇಟ್ಮೆಂಟ್ ನೀಡಿದ್ದಾರೆ.ಆದ್ರೆ ಅಸಲಿಗೆ ತಮಗೆ ಟಿಕೆಟ್ ನೀಡುವಂತೆ ಈಗಾಗಲೇ ಶೆಟ್ಟರ್ ಕಾಂಗ್ರೆಸ್ ವರಿಷ್ಠರ ಬಳಿ ಬೇಡಿಕೆ ಇಟ್ಟಿದ್ದು ಇದಕ್ಕೆ ಸಕಾರಾತ್ಮಕ ಉತ್ತರ ದೊರೆತಿಲ್ಲ. ಇನ್ನು ಟಿಕೆಟ್ ಆಕಾಂಕ್ಷಿ ಎಂದು ಹೇಳಿದ ನಂತರ ತಮಗೆ ದೊರೆಯದೆ ಇದ್ದಲ್ಲಿ ವರ್ಚಸ್ಸು ಕೂಡ ಕಡಿಮೆ ಆಗುವ ಸಾದ್ಯತೆ ಇಂದ ಈ ದಾಳ ಉರುಳಿಸಿದ್ದಾರೆ.

*ಪ್ರದೀಪ್ ಶೆಟ್ಟರ್ ಟಿಕೆಟ್ ಬೇಡಿಕೆ*

ಸಹೋದರನ ಹುಟ್ಟು ಹಬ್ಬದ ದಿನವೇ ಪರಿಷತ್ ಸದಸ್ಯರಾಗಿರುವ ಪ್ರದೀಪ್ ಶೆಟ್ಟರ್ ಕೂಡ ಲಿಂಗಾಯತ ದಾಳ ಉರುಳಿಸಿದ್ದು ತಾನು ಟಿಕೆಟ್ ಆಕಾಂಕ್ಷಿ ಎಂದು ನೇರವಾಗಿ ಬಿಜೆಪಿ ಪಾಳಯಕ್ಕೆ ಮೆಸೇಜ್ ನೀಡಿದ್ದಾರೆ. ಇಷ್ಟು ದಿನ ಕದ್ದು-ಮುಚ್ಚಿ ಸಹೋದರನ ಬೆನ್ನಿಗೆ ಇದ್ದ ಪ್ರದೀಪ್ ಶೆಟ್ಟರ್ ಇಂದು ಬಹಿರಂಗವಾಗಿ ಟಿಕೆಟ್ ಬೇಡಿಕೆ ಇಟ್ಟಿದ್ದು ಜಗದೀಶ್ ಶೆಟ್ಟರ್ ಉರುಳಿಸುವ ಬಹುಮುಖ್ಯ ದಾಳ ಎಂದು ಬಣ್ಣಿಸಲಾಗುತ್ತಿದೆ.

ಇನ್ನೂಲೋಕಸಭೆ ಟಿಕೆಟ್ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಬೇಡಿಕೆ ಇಟ್ಟಿರುವ ಶೆಟ್ಟರ್ ಕುಟುಂಬದ ಓರ್ವ ಸದಸ್ಯರು.ರಾಜಕಾರಣದಲ್ಲಿ ಇರುವ ತಮ್ಮ ಸಂಬಂಧಿಗಳಾದ ಅಂಗಡಿ ಕುಟುಂಬ, ಬಿಜಾಪುರದ ಪಾಟೀಲ್ ಕುಟುಂಬ ಹಾಗೂ ದಾವಣಗೆರೆ ಶಾಮನೂರು ಪ್ರಭಾವದಿಂದ ಆದ್ರೂ ಟಿಕೆಟ್ ಮತ್ತೊಮ್ಮೆ ಪಡೆಯಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದು ಆದ್ರೆ ಇದಕ್ಕೆ ಮಾತ್ರ ಕಾಂಗ್ರೆಸ್ ರಾಜ್ಯ ನಾಯಕರು ಫುಲ್ ಸ್ಟಾಪ್ ಇಟ್ಟಿದ್ದು ಶೆಟ್ಟರ್ ಬಿಜೆಪಿ ನಂಟಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಪ್ರಲ್ಹಾದ ಜೋಶಿ ಪ್ರಭಾವ ತಗ್ಗಿಸಿ ಅವರನ್ನು ಇಲ್ಲಿಂದ ಬೇರೆ ಕ್ಷೇತ್ರಕ್ಕೆ ಕಳುಹಿಸಿದರೆ ಮತ್ತೆ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಬಹುದು ಜೊತೆಗೆ ತಮ್ಮ ಕುಟುಂಬದ ಮಕ್ಕಳು, ಮೊಮ್ಮಕ್ಕಳಿಗೆ ರಾಜಕೀಯ ನೆಲೆ ಕಲ್ಪಿಸಬಹುದು ಎನ್ನುವುದು ಶೆಟ್ಟರ್ ಕುಟುಂಬದ ಲೆಕ್ಕಾಚಾರ.ಹೀಗಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ವಾದರು ಸೈ ತಮ್ಮ ಕುಟುಂಬಕ್ಕೆ ಟಿಕೆಟ್ ಪಡೆಯಲೇಬೇಕು ಎಂದು ತಂತ್ರ ಹಣೆದಿರುವ ಮುತ್ಸದಿ ರಾಜಕಾರಣಿಗೆ ಏನಾಗಲಿದೆ ಎಂದು ಕಾದುನೋಡಬೇಕಿದೆ.

Share News

About BigTv News

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *