Breaking News
Featured Video Play Icon

ನಿಯಮ ಮೀರಿ ರಾತ್ರಿ 12.30 ಆದ್ರೂ ತೆರೆದ ಹೋಟೆಲ್; ಕುಡುಕ ಯುವಕರ ಗುಂಪಿನ ನಡುವೆ ಮಾರಾಮಾರಿ…

ಊಟದ ವಿಚಾರ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ;ಪೊಲೀಸರು ಬಂದ್ರು ಡೋಂಟ್ ಕೇರ್ ಎಂದ ಪುಂಡರುಹುಬ್ಬಳ್ಳಿ:ನಗರದಲ್ಲಿನ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟದ ವಿಚಾರಕ್ಕೇ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶನಿವಾರ ತಡರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.ಕಾರವಾರ ರಸ್ತೆಯಲ್ಲಿರುವ ಪರಜಾನ ಹೋಟೆಲ್ ನಲ್ಲಿ ಶನಿವಾರ ರಾತ್ರಿ 12.30 ರ ಸುಮಾರಿಗೆ ಊಟವನ್ನು ಮಾಡಲು ಬಂದಿದ್ದ ಯುವಕರ ಗುಂಪಿನ ಜೊತೆ ಹೋಟೆಲ್ ಸಿಬ್ಬಂದಿ ಹಾಗೂ ಅದೇ ಹೋಟೆಲ್ ನಲ್ಲಿ ಊಟವನ್ನು ಮಾಡಲು ಬಂದಿದ್ದ ಇನ್ನೊಂದು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೋಟೆಲ್ ನಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಈ ವೇಳೆ ಹೋಟೆಲ್ ನಲ್ಲಿ ಹೊಡೆದಾಟದ ಸುದ್ದಿ ತಿಳಿಯುತ್ತಿದ್ದ ಹಾಗೆ ಎರಡು ಗುಂಪಿನ ಕಡೆಯ ಯುವಕರು ಹೋಟೆಲ್ ನಲ್ಲಿ ಬಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ,ಗಲಾಟೆ ಜ್ಯಾಸ್ತಿ ಆಗುತ್ತಿದ್ದ ಹಾಗೆ ಹೋಟೆಲ್ ನವರು ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ.ಆದ್ರೆ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪಿನ ಯುವಕರು ನಡು ರಸ್ತೆಯಲ್ಲಿಯೇ ಮತ್ತೆ ಜಗಳ ತೆಗೆದು ನಡು ರಸ್ತೆಯಲ್ಲಿಯೇ ಯುವಕನನ್ನು ಮನಸ್ಸೋ ಇಚ್ಛೆ ಥಳಿಸಿದ್ದಾರೆ, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಬಂದರು ಕೂಡಾ ಪೊಲೀಸರಿಗೆ ತಲೆ ಕೆಡಿಸಿಕೊಳ್ಳದೆ ನಶೆಯಲಿದ್ದ ಯುವಕರು ನಡು ರಸ್ತೆಯಲ್ಲಿಯೇ ಯುವಕನನ್ನು ಪೊಲೀಸ್ ಸಿಬ್ಬಂದಿಯ ಮುಂದೆಯೇ ಥಳಿಸಿದ್ದಾರೆ.ಸದ್ಯ ಈ ಹೊಡೆದಾಟದ ಭಾಗಿಯದವರು ಯಾರು ಎಲ್ಲಿಯವರು ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಹೊಡೆದಾಟದ ವಿಡಿಯೋ ಆಧರಿಸಿ ಆರೋಪಿಗಳು ಯಾರು ನಡು ರಸ್ತೆಯಲ್ಲಿಯೇ ಹೊಡೆತ ತಿಂದ ಯುವಕ ಯಾರು ಎಂಬೆಲ್ಲಾ ಮಾಹಿತಿ ಕಲೆh ಹಾಕುತ್ತಿದ್ದು,ಹೊಸ ವರ್ಷದ ಮುನ್ನಾ ದಿನವೇ ಈ ಘಟನೆ ನಡೆದಿದ್ದು ಹುಬ್ಬಳ್ಳಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಏನೆ ಆದರೂ ಇಷ್ಟೊಂದು ಸಮಯದಲ್ಲೂ ಹೋಟೆಲ್ ರಾಜಾರೋಷವಾಗಿ ನಡೆಯುತ್ತಿದ್ದರೂ ಈ ಹೋಟೆಲಗಳಿಗೆ ಬೆಂಬಲ ನೀಡುತ್ತಿರುವುದು ಯಾರು…? ಅನ್ನೋದು ತಿಳಿದು ಬರುಯ್ತಿಲ್ಲಾ. ಈಗಲಾದರೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಇವರ ಮೇಲೆ ಕಠಿಣ ಕ್ರಮ ತೆಗೆದು ಕೊಂಡು ಬಂದ್ ಮಾಡಿಸಲು ಮುಂದಾಗುತ್ತರಾ ಅಥವಾ ಹಾಗೆ ಸುಮ್ಮನೆ ಕುಳಿತು ಕೊಳ್ಳುತ್ತಾರಾ ಕಾದು ನೋಡಬೇಕಿದೆ….

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *