Breaking News
Featured Video Play Icon

ಬಿಗ್‌ ಟಿವಿ ನ್ಯೂಸ್‌ ಇಂಪ್ಯಾಕ್ಟ್-ರೌಡಿಗ್ಯಾಂಗ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕಮೀಷನರ್‌….

ಗೂಂಡಾಗಿರಿ ಖತಂ.. ಪೊಲೀಸ್ ಗಿರಿ‌ ಸ್ಟಾರ್ಟ್..!

ರೌಡಿಶೀಟರ್ ಗಳಿಗೆ ಖಾಕಿ ಬಿಸಿ…

ರೌಡಿಗಳ ಅಡ್ಡವಾದ ಹುಬ್ಬಳ್ಳಿಯ ಸರ್ಕಿಟ್ ಹೌಸ್. ಸರ್ಕಿಟ್ ಹೌಸ್‌ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸುವುದು ಸಾಮಾನ್ಯ. ಆದ್ರೆ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ರೌಡಿಶೀಟರ್‌ಗಳೂ ಮೀಟಿಂಗ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಬಹುತೇಕ ಪುಡಿರೌಡಿಗಳು ಸರ್ಕಿಟ್ ಹೌಸ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ…

ಹುಬ್ಬಳ್ಳಿಯ ಪ್ರಮುಖ ಮೂರು ಗ್ಯಾಂಗ್‌ಗಳು ಸರ್ಕಿಟ್ ಹೌಸ್‌ನಲ್ಲಿ ಸೇರಿ ಸಭೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಮ್ ಸಾಥ್ ಸಾಥ್ ಹೈ ಎಂದು ಕೈ ಜೋಡಿಸಿದ ರೌಡಿ ಶೀಟ್‌ಗಳು‌, ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಅಥವಾ ಸಹಕಾರವೋ ಗೊತ್ತಿಲ್ಲ

ಸರ್ಕಿಟ್ ಹೌಸ್ ಈಗ ರೌಡಿಗಳ ಮೀಟಿಂಗ್ ಅಡ್ಡೆಯಾಗಿರುವ ಬಗ್ಗೆ ಬಿಗ್‌ ಟಿವಿ ನ್ಯೂಸ್‌ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ಕಮೀಷನರ್ ರೌಡಿಶೀಟರ್ ಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಅವರುಗಳ ಇತ್ತಿಚಿನ ಮತ್ತು ಹಿಂದಿನ ಚಟುವಟಿಕೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. ಅವರ ಡೊಷಿಯರ್ ಶೀಟ್ ಗಳನ್ನು ಅಪ್ ಡೇಟ್ ಮಾಡಿದ್ದು, ಅಗತ್ಯ ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ..ಒಟ್ನಲ್ಲಿ ಅವಳಿನಗರದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಹಾರಾಡುತ್ತಿದ್ದ ಲಾಂಗು ಮಚ್ಚುಗಳು ಹಾಗೂ ರೌಡಿಗಳನ್ನು ಹೊಸ ಕಮೀಷನರ್‌ ಖಡಕ್‌ ಆಡಳಿದಿಂದ ಮೂಟೆ ಕಟ್ಟಿದ್ದಾರೆ.. ಪೊಲೀಸ್ ಭಯವೇ ಇಲ್ಲದೇ ಪರಸ್ಪರ ಸೆಣಸಾಟಕ್ಕೆ ಇಳಿದಿದ್ದ ರೌಡಿ ಗ್ಯಾಂಗ್‌ಗಳಿಗೆ ಕಮೀಷನರ್‌ ಖಡಕ್‌ ವಾರ್ನಿಂಗ್‌ ಮೂಲಕ ವಾಣಿಜ್ಯ ನಗರಿ ಜನತೆಗೆ ನೆಮ್ಮದಿ ನೀಡುವಂತ ಕೆಲಸ ಮಾಡಿದೆ. ಈಗಾಗಲೇ ರೌಡಿಗಳನ್ನು ಮಟ್ಟ ಹಾಕುತ್ತಿರುವ ಪೊಲೀಸ್ ಆಯುಕ್ತರು ಖಡಕ್‌ ಎಚ್ಚೆರಿಕೆಗಳನ್ನು ನೀಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ..

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *