Breaking News
Featured Video Play Icon

ಹು-ಧಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 96.5 ಲಕ್ಷ ನಗದು ಹಾಗೂ ಲಕ್ಷಾಂತರ ಮೌಲ್ಯದ ಗಾಂಜಾ ವಶ…

ಅವಳಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ..

ಇನ್ಸ್ಪೆಕ್ಟರ್ ತಹಶಿಲ್ದಾರ ಕಾರ್ಯಚರಣೆಗೆ ಮನಸಾರೆ ಕೊಂಡಾಡಿದ ಕಮಿಷನರ್..

ಗಾಂಜಾ ಮಾರಾಟಗಾರನ ಹತ್ತಿರ ಲಕ್ಷ ಲಕ್ಷ ಹಣ!!!!

ಗಾಂಜಾ ಮುಕ್ತ  ಅವಳಿ ನಗರದತ್ತ ಪೋಲೀಸ್ ಕಮಿಷನರ್  ನಡೆ.

ಹುಬ್ಬಳ್ಳಿ: ಒಬ್ಬ‌ ಖದಿಮ ಅವನ ಹತ್ತಿರ ಹೋಗಿ ಚೆಕ್ ಮಾಡಿದಾಗ ಸಿಕ್ಕಿದ್ದು ಲಕ್ಷ ಲಕ್ಷ ಹಣ ಹಾಗು ಸಮಾಜಕ್ಕೆ ಮಾರಕವಾದಂತ ನಿಷೇದಿತ ವಸ್ತುಗಳು ಹೀಗೆಲ್ಲ ಸಿಕ್ಕಿದ್ದು ಯಾರ ಹತ್ತಿರ ಅಂತೀರಾ..???? ಹಾಗಾದ್ರೆ ಇವರು ಯಾರ ಕೈಗೆ ಸಿಕ್ರು ಅನ್ನೊ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ… ಹುಬ್ಬಳ್ಳಿಯ ಶಹರ ಪೋಲೀಸ್ ಠಾಣೆಯ ಖಡಕ್ ಪೋಲಿಸ್ ಇನ್ಸ್ಪೆಕ್ಟರ್ ಎಮ್‌ ಎಮ್ ತಹಶಿಲ್ದಾರ ಅವರ ಕಾರ್ಯದಕ್ಷತೆ ಅವಳಿ ಜನರಿಗೆ ಗೊತ್ತು ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ಜನರ ಪ್ರೀತಿ ಗಳಿಸಿದ ತಹಶಿಲ್ದಾರ ಸಾಹೇಬ್ರು ಇಂದು ಮತ್ತೊಮ್ಮೆ ಅದನ್ನ ಸಾಬಿತು ಮಾಡಿದ್ದಾರೆ… ಅವಳಿ ನಗರದಲ್ಲಿ ಈಗ‌ ಸದ್ದು ಮಾಡುತ್ತಿರುವದು ಗಾಂಜಾ ಘಾಟು ಪ್ರಕರಣಗಳು ಹೊಸ ಕಮಿಷನರ್ ಎನ್ ಶಶಿಕುಮಾರ ಬಂದ ನಂತರ ಅವಳಿ ನಗರದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿ ಜೀವನದತ್ತ ಸಾಗುತ್ತಿದ್ದಾರೆ… ನಿನ್ನೆ ಸಾಯಂಕಾಲ ನಗರದ

ರೈಲ್ವೆ ನಿಲ್ದಾಣ ಬಳಿಯಿರುವ ಬೋಗಿ ಬೋಗಿ ಹೊಟೇಲ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ, ಎಸಿಪಿ ದಕ್ಷಿಣರವರ ನೇತೃತ್ವದಲ್ಲಿ ಶಹರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಮ್.ಎಮ್. ತಹಶಿಲ್ದಾರ, ಪಿಎಸ್ಐ ಮಾರುತಿ ಅವರನ್ನು ಒಳಗೊಂಡ ತಂಡ ಮಾಹಿತಿ ಬಂದ ಸ್ಥಳದ ಮೇಲೆ ದಾಳಿ ಮಾಡಿ ಬಂಧನ ಮಾಡಿದ್ದಾರೆ. ರಾಜಸ್ಥಾನ ಮೂಲದ ಓಂಪ್ರಕಾಶ್ ಎಂಬಾತನನ್ನು ಬಂಧನ ಮಾಡಿ ಆತನಿಂದ 85,000 ರೂ. ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷ ರೂ. ಮೌಲ್ಯದ ಒಂದು ಕೀಯಾ ಸೋನೆಟ್ ಕಾರು, 50,000 ರೂ. ಮೌಲ್ಯದ ಒಂದು ಐಫೋನ್‌, ವಿವಿಧ ಬ್ಯಾಂಕಿನ 30 ಎಟಿಎಂ ಕಾರ ವಿವಿಧ ಬ್ಯಾಂಕಿನ 36 ಚೆಕ್ ಬುಕ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ಟಾಪಿಂಗ್ ಮಷೀನ್ ಗಳನ್ನು ಹಾಗೂ 96,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಬಂಧಿತನಿಂದ 1,06,85,000 ರೂ. ಮೌಲ್ಯದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ …… ರಾಜಸ್ಥಾನದಲ್ಲಿ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡಿದ್ದ, ಈ ಮೊದಲು ಗೋವಾದಲ್ಲಿ ಗಾಂಜಾ ದಂಧೆಗೆ ಇಳಿಯಲು ಮೂರು ತಿಂಗಳು ಕಾಲ ತರಬೇತಿ ಪಡೆದಿದ್ದ ಎಂದು ತಿಳಿದು ಬಂದಿದೆ. ಕೇಶ್ವಾಪೂರ ವ್ಯಾಪ್ತಿಯಲ್ಲಿ ಆತ ವಾಸವಾಗಿದ್ದ, ಯಾವುದೇ ಕೆಲಸದಲ್ಲಿ ತೊಡಗಿಲ್ಲ ಈತನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ವಲು ಪೊಲೀಸ್ ಪಡೆ ಬಲೆ ಬಿಸಿದೆ…. ಒಟ್ಟಾರೆಯಾಗಿ ಅವಳಿನಗರವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ಖಾಕಿ ಪಡೆ ಆದಷ್ಟು ಬೇಗ ಯಶಸ್ಸು ಕಾಣಲಿ ಅನ್ನುವದು ಜನರ ಹಾರೈಕೆ……

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *