Breaking News
Featured Video Play Icon

ನ್ಯಾಯಕ್ಕಾಗಿ ಠಾಣೆಗೆ ಬಂದರೇ ಮಂಚಕ್ಕೆ ಕರೆದ ಪಿಐ: ಪೊಲೀಸರಲ್ಲೊಬ್ಬ ಪೋಲಿ…?

ಮನನೊಂದ ಮಹಿಳೆಯ ಗಂಭೀರ ಆರೋಪ..

ಸಿಪಿಐ ನಂಜಪ್ಪ ವಿರುದ್ಧ ಕಿರುಕುಳ : ಮಹಿಳೆ ಆರೋಪ..

ನ್ಯಾಯಕ್ಕಾಗಿ ಠಾಣೆಗೆ ಬಂದರೇ ಮಂಚಕ್ಕೆ ಕರೆದ ಪಿಐ: ಪೊಲೀಸರಲ್ಲೊಬ್ಬ ಪೋಲಿ..?

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)

ಕೋಲಾರ : ಬಂಗಾರಪೇಟೆ ಪೊಲೀಸ್ ಠಾಣೆಯ ಸಿಪಿಐ ನಂಜಪ್ಪ ವಿರುದ್ಧ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

.ಮಹಿಳೆಯೂ ಸಿಪಿಐ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ.ಪಕ್ಕದ ಮನೆಯವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ಇದರ ಬಗ್ಗೆ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ ನಮ್ಮನ್ನೇ ಶೋಷಿಸಲಾಗುತ್ತಿದೆ.

ಠಾಣೆಗೆ ಕರೆಸಿ ನನ್ನನ್ನು ಮಲಗೋಕೆ ಬಾ ಎಂದು ಸಿಪಿಐ ಕರೆಯುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಪೊಲೀಸರನ್ನು ಆಗಾಗ ಮನೆ ಬಳಿ ಕಳುಹಿಸಿ ಕಿರುಕುಳ, ಅವಮಾನ ನೀಡುತ್ತಿದ್ದಾರೆ. ಅಲ್ಲದೇ ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ.

ನನ್ನ ಮೇಲೆ ವೇಶ್ಯಾವಾಟಿಕೆ ಕೇಸ್‌, ನನ್ನ ಗಂಡನ ವಿರುದ್ಧ ರೌಡಿಶೀಟ್ ಕೇಸ್ ತೆರೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.ನಮಗೆ ರಕ್ಷಣೆ ಕೊಡಿ ಎಂದು ಮಹಿಳೆ ಮನವಿ ಮಾಡಿರುವ  ವಿಡಿಯೋ ವೈರಲ್ ಆಗಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ಈ ವಿಡಿಯೋ ಮಾಡಿದ್ದಾರೆ.ಇನ್ನೂ ಈ ಪ್ರಕರಣವನ್ನು ವಿಚಾರಣೆ ಮಾಡಿ ವರದಿ ನೀಡುವಂತೆ ಕೆಜಿಎಫ್ ಎಸ್ಪಿ ಅವರು ಕೆಜಿಎಫ್ ಡಿವೈಎಸ್‌ಪಿ ಪಾಂಡುರಂಗ ಅವರಿಗೆ ಆದೇಶ ನೀಡಿದ್ದಾರೆ.

Share News

About Shaikh BigTv

Check Also

ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ

ಕೊಪ್ಪಳ: ಚಿಕಿತ್ಸೆ ಪಡೆಯಲು ಖಾಸಗಿ ಕ್ಲಿನಿಕ್‌ಗೆ ಬಂದಿದ್ದ ಮಹಿಳೆ ಮೇಲೆ ಆರ್‌ಎಂ‌ಪಿ ವೈದ್ಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಕುಕನೂರು …

Leave a Reply

Your email address will not be published. Required fields are marked *