Breaking News

admin

ಕಾಂಗ್ರೆಸ್ ಪಕ್ಷ 5 ರಾಜ್ಯಗಳಲ್ಲಿ ಸೋತು ಅವರಿಗೆ ನಿದ್ರಾಹೀನತೆ ಕಾಡುತ್ತಿದೆ : ಮಹೇಶ್ ಟೆಂಗಿನಕಾಯಿ ವಾಗ್ದಾಳಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಐದು ರಾಜ್ಯಗಳಲ್ಲಿ ಸೋತ ನಂತರ ಅವರಿಗೆ ನಿದ್ರಾಹೀನತೆ ಕಾಡುತ್ತಿದೆ. ಸಿದ್ದರಾಮಯ್ಯ ಹಿಟ್ ಆ್ಯಂಡ್ ರನ್ ಆರೋಪ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಕೆ ಪಿ ಎಸ್ ಸಿ ಸಾಕಷ್ಟು ಹಗರಣ ಆಗಿವೆ. ಪ್ರಿಯಾಂಕ್ ಖರ್ಗೆ ಆರೋಪ ಮಾಡ್ತಾರೆ. ಆದರೆ ಸಿಐಡಿ ಮೂರು ನೋಟಿಸ್ ನೀಡಿದ್ರು ಉತ್ತರ ನೀಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ …

Read More »

ಫೇಸ್‌ಬುಕ್ ನಲ್ಲಿ ಜಾಹೀರಾತು ವೀಕ್ಷಿಸಿ ಮೋಸಕ್ಕೆ ಒಳಗಾದ ಹುಬ್ಬಳ್ಳಿ ಯುವಕ

ಹುಬ್ಬಳ್ಳಿ: ಫೇಸ್‌ಬುಕ್ ನಲ್ಲಿ ಜಾಹೀರಾತು ವೀಕ್ಷಿಸಿದ ಘಂಟಿಕೇರಿ ಶೀಲವಂತರ ಓಣಿಯ ವಿನೋದ ಜರತಾರಘರ ಎಂಬುವವರು ವಸ್ತುವನ್ನು ಖರೀದಿಸಲು ಮುಂದಾದಾಗ ಅಪರಿಚಿತ ವ್ಯಕ್ತಿ ಓರ್ವ 40 , 500 ರೂ . ವಂಚಿಸಿದ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ . ಫೇಸ್‌ಬುಕ್ ನಲ್ಲಿ ರಬ್ಬರ್ ಬ್ಯಾಂಡ್ ಜಾಹೀರಾತು ನೋಡಿ ಕಮೆಂಟ್‌ನಲ್ಲಿದ್ದ ನಂಬರ್ ಕರೆ ಮಾಡಿದ್ದಾರೆ . ಕರೆ ಸ್ವೀಕರಿಸಿದ ವ್ಯಕ್ತಿ ಓರ್ವ ಮಾತನಾಡಿ ತನ್ನ ಖಾತೆಗೆ ವಿನೋದ ಅವರಿಂದ ಹಣ ವರ್ಗಾಯಿಸಿಕೊಂಡಿದ್ದಾನೆ …

Read More »

ನಾಗರಹಾವುವನ್ನು ಸಂರಕ್ಷಿಸಿದ ಸ್ನೇಕ್ ನಾಗರಾಜ

ಹುಬ್ಬಳ್ಳಿ : ನಗರದ ಹೊಸೂರು ಶಕುಂತಲಾ ಹಾಸ್ಪಿಟಲ್ ನಿರ್ದೇಶಕ ಗಡಗಿ ಡಾಕ್ಟರ್ ಅವರ ಮನೆಯಲ್ಲಿ ಬಂದಂತ ನಾಗರಹಾವು ಸ್ನೇಕ್ ನಾಗರಾಜ ಅವರು ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇನ್ನೂ ಹಾವು ಸಂದರ್ಭದಲ್ಲಿ ಆತಂಕದಲ್ಲಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿರುವ ಹಿನ್ನೆಲೆ ನಾಗರಾಜ ಹಾವು ರಕ್ಷಣೆ ಮಾಡುವ ಮೂಲಕ ಆತಂಕ ದೂರು ಮಾಡಿದರು .

Read More »

ಕರೆಂಟ್ ಶಾಕ್ ಹೊಡೆದು ಹಸು ಸಾವು

ಹುಬ್ಬಳ್ಳಿ : ವಿದ್ಯುತ್ ಕಂಬದಿಂದ ಟೆಲಿಕಾಂ ಕಂಬಕ್ಕೆ ವಿದ್ಯುತ್ ಸಂಪರ್ಕಿಸಿ ಪಕ್ಕದಲ್ಲಿ ಹೋಗುತ್ತಿದ್ದ ಹಸು ಕರೆಂಟ್ ಶಾಕ್ ಹೊಡೆದಿರು ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಮುಲ್ಲಾ ಓಣಿ ಮುಖ್ಯ ರಸ್ತೆಯ ಅರಳಿಕಟ್ಟಿ ಕ್ರಾಸ್ ಬಳಿ ನಡೆದಿದೆ . ಈ ಸ್ಥಳದಲ್ಲಿ ವಿದ್ಯುತ್ ಕಂಬವಿದೆ ಅದರ ಪಕ್ಕದಲ್ಲಿ ಟೆಲಿಕಾಂ ಕಂಬ ಕೂಡ ಇದೆ . ಇದರಿಂದಾಗಿ ವಿದ್ಯುತ್ ಸಂಪರ್ಕಿಸಿ ಹಸು ಸಾವನ್ನಪ್ಪಿದೆ ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ . …

Read More »

ಗ್ರಾ.ಪಂ ಚುನಾವಣೆಯ ವೇಳಾಪಟ್ಟಿ ಪ್ರಕಟ

ಧಾರವಾಡ : ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯತ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ . ಮೇ 5 ರಂದು ಜಿಲ್ಲಾಧಿಕಾರಿಯವರಿಂದ ಅಧಿಸೂಚನೆ ಪ್ರಕಟ , ಮೇ 10 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.ಮೇ 11 ರಂದು ನಾಮಪತ್ರಗಳ ಪರಿಶೀಲನೆ , ಮೇ 13 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ . ಮೇ 20 ಶುಕ್ರವಾರದಂದು ಬೆಳಿಗ್ಗೆ 7 ರಿಂದ …

Read More »

ನವಲೂರು ಗ್ರಾಮದ ಮೇಲ್ವೇತುವೆ ಕಾಮಗಾರಿ ಪುನರಾರಂಭ

ಹುಬ್ಬಳ್ಳಿ : ಅವಳಿ ನಗರದ ರಸ್ತೆ ಮಧ್ಯೆ ಇರುವ ನವಲೂರು ಗ್ರಾಮದ ಮೇಲ್ವೇತುವೆ ಕಾಮಗಾರಿ ಇದೀಗ ಪುನರಾರಂಭಗೊಂಡಿದೆ . ನವಲೂರು ಗ್ರಾಮದ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿತ್ತು . ಗ್ರಾಮಸ್ಥರಿಗೆ ಈ ಕಾಮಗಾರಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ ಎಂದು ನವಲೂರು ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸಿದ್ದರು . ಅಲ್ಲದೆ , ನ್ಯಾಯಾಲಯದಲ್ಲಿ ಪ್ರಕರಣವನ್ನು ಸಹ ದಾಖಲಿಸಿದ್ದರು . ಇದೀಗ ಹುಬ್ಬಳ್ಳಿ – …

Read More »

ರಸ್ತೆ ಅಪಘಾತದಲ್ಲಿ ಯೋಧ ಸಾವು

ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದಾಸರಕೊಪ್ಪಲು ಗ್ರಾಮದ ಯೋಧ ಸಂಜಯ್ (22) ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್, ರಜೆಯ ಮೇಲೆ ತವರಿಗೆ ಬಂದಿದ್ದರು.ಮೂರು ದಿನಗಳ ಹಿಂದೆ ಹಾಸನದ ಎಂ.ಜಿ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಶ ಸೇವೆ ಮಾಡಬೇಕು ಎಂಬ ಮಹದಾಸೆಯಿಂದ ಭಾರತೀಯ ಸೇನೆ ಸೇರಿದ್ದ ಸಂಜಯ್, …

Read More »

11 ಜಿಲ್ಲೆಗಳಲ್ಲಿ ಭಾರಿ ಮಳೆ : ಮೂವರು ಸಾವು

ಬೆಂಗಳೂರು: ರಾಜ್ಯದ 11 ಜಿಲ್ಲೆಗಳಲ್ಲಿ ಬುಧವಾರ ಆಕಾಲಿಕ ಮಳೆ ಆರ್ಭಟಿಸಿದ್ದು ಮಳೆ ಸಂಬಂಧಿ ಕಾರಣಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ.

Read More »

ಟ್ರಕ್‌ ಬಸ್‌ಗೆ ಡಿಕ್ಕಿ: ಕರ್ನಾಟಕದ ಇಬ್ಬರು ಸಾವು

ಇಟಾವಾ, ಉತ್ತರ ಪ್ರದೇಶ: ಲಖನೌ-ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಬಸ್‌ಗೆ ಡಿಕ್ಕಿ ಹೊಡೆದ ‍ಪರಿಣಾಮ ಕರ್ನಾಟಕದ ಇಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ‘ಮೃತಪಟ್ಟವರನ್ನು ಬೆಳಗಾವಿಯ ವಿಠಲ್‌ ಮಾರುತಿ ಮತ್ತು ಅವರ ಪತ್ನಿ ಸುಲೋಚನಾ ಎಂದು ಗುರುತಿಸಲಾಗಿದೆ. ವಿಠಲ್‌ ದಂಪತಿ ಹಾಗೂ ಉಳಿದ 11 ಮಂದಿ ಆಗ್ರಾಕ್ಕೆ ಪ್ರವಾಸಕ್ಕೆಂದು ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಟ್ರಕ್‌ವೊಂದು ಬಸ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು …

Read More »

ಪಿಎಸ್‌ಐ ನೇಮಕಾತಿ ಅಕ್ರಮ : ಡಿವೈಎಸ್‌ಪಿ, ಎಸ್ಪಿ ಅಮಾನತು

ಬೆಂಗಳೂರು : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಆರೋಪದ ಮೇಲೆ ಕಲಬುರಗಿ ಬೆರಳಚ್ಚು ವಿಭಾಗದ ಡಿವೈಎಸ್‌ಪಿ ಆರ್‌.ಆರ್‌. ಹೊಸಮನಿ ಮತ್ತು ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಿಲೀಪ್‌ ಸಾಗರ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ. ಪರೀಕ್ಷಾ ಅಕ್ರಮ ನಡೆದಿರುವ ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದ ಉಸ್ತುವಾರಿಯಾಗಿ ಆರ್‌.ಆರ್‌. ಹೊಸಮನಿ ಮತ್ತು ಮೇಲ್ವಿಚಾರಕರಾಗಿ ದಿಲೀಪ್‌ ಸಾಗರ್‌ ಕಾರ್ಯನಿರ್ವಹಿಸಿದ್ದರು. ಈ ಇಬ್ಬರೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿರುವ ಕಾರಣದಿಂದ ಅಮಾನತು ಮಾಡಲಾಗಿದೆ …

Read More »