Breaking News

admin

ಟಿಪ್ಪು ಸುಲ್ತಾನ್ ಜಯಂತಿ ರದ್ದು ಪಡಿಸಿರುವುದನ್ನು ಖಂಡಿಸಿ ಹು-ಧಾ ಮಹಾನಗರಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಕಾಂಗ್ರೆಸ್ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಏಕಾಏಕಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಪಡಿಸಿರುವುದು ಖಂಡನೀಯವಾಗಿದೆ.ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಬಿಜೆಪಿ ಸರ್ಕಾರ ಈ ರೀತಿ ಏಕಾಏಕಿ ಜಯಂತಿ ರದ್ದು ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪು …

Read More »

ಸಿದ್ದಾರ್ಥ ಸಾವಿನ ಬಗ್ಗೆ ಪ್ರಾಮಾಣಿಕ ತನಿಖೆಗೆ ಎಸ್.ಆರ್.ಹಿರೇಮಠ ಆಗ್ರಹ

ಹುಬ್ಬಳ್ಳಿ: ಕಾಪಿ ಡೇ ಮಾಲೀಕ ವ್ಹಿ.ಜಿ.ಸಿದ್ಧಾರ್ಥ್ಅವರ ನಿಗೂಡ ಸಾವಿನ ಹಿಂದೆ ಇರುವಕೈವಾಡದ ಕುರಿತು ಪ್ರಮಾಣಿಕ ತನಿಖೆಯಾಗಬೇಕುಎಂದು ಸಮಾಜ ಪರಿವರ್ತನಾ ಸಮುದಾಯದಮುಖಂಡರಾದ ಎಸ್.ಆರ್.ಹಿರೇಮಠ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಡಾರ್ಕ್ ಪೈಬರ್, ಕೊಲೋಶನ್ ಬಹುದೊಡ್ಡ ಹಗರಣವಾಗಿದ್ದು, ಇದರ ಮುಖ್ಯಸ್ಥರಾಗಿ ವಿ.ಜಿ.ಸಿದ್ಧಾರ್ಥ್ ಅವರು ಕೂಡ ಇದ್ದಾರೆ ಎಂದರು. ವೇ ಟೂ ವೆಲ್ತ್ ಹಾಗೂ ಅಲ್ಪಾಗ್ರಾಫ್ ಕಂಪನಿಗಳು ಸಿಂಗಪೂರ್ಹಾಗೂ ಹಾಂಗ್ ಕಾಂಗದಲ್ಲಿದರುವ ತನಿಖಾ ಸಂಸ್ಥೆ ‘ಸೆಬಿ’ ರೂ.14.5 ಕೋಟಿ ಮೊತ್ತದ ದಂಡವನ್ನು ಕೂಡ ವಿಧಿಸಿದ್ದಾರೆ. ಅಲ್ಲದೇ …

Read More »

ಆ.1ರಿಂದ ಎಲಬು ಕೀಲು ದಿನಾಚರಣೆ ಸಪಾಹ್ತ

ಹುಬ್ಬಳ್ಳಿ: ಹು-ಧಾ ಅರ್ಥೋಪೆಡಿಕ್ ವತಿಯಿಂದ ಆರೋಗ್ಯಕರ ಜೀವನಕ್ಕೆ ಎಲುಬಿನ ಕೊಡುಗೆ ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರೀಯ ಎಲಬುಕೀಲು ದಿನಾಚರಣೆಯ ಸಪ್ತಾಹವನ್ನು ಆ.1 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಗುರುರಾಜ ಮುರುಗೋಡ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ದಿನಗಳಲ್ಲಿ ಜನರು ಹಲವಾರು ಒತ್ತಡಗಳಿಂದ ಪೌಷ್ಟಿಕ ಆಹಾರದ ಕಡೆ ಗಮಗ ಕೊಡದೇ ಇರುವ ಕಾರಣ ಆರೋಗ್ಯ ಹಾಗೂ ಎಲುಬಿನ ಸಾಂದ್ರತೆಯನ್ನು ಹಾಳು ಮಾಡಿಕೊಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಲಬುಕೀಲು …

Read More »

ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ರೀಕ್ಷಾ ಚಾಲಕ ಪ್ರತಿಭಟನೆ

ಧಾರವಾಡ :ನಗರದ ಶಾಲಾ ವಾಹನ ತಪಾಸಣೆ ಹಾಗೂ ಜಿಲ್ಲಾ ಆಟೋ ರೀಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನಗರದಲ್ಲಿ ಆಟೋ ರೀಕ್ಷಾ ಹಾಗೂ ವ್ಯಾನ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾರ್ಯದಲ್ಲಿ ತಮ್ಮ ತಮ್ಮ ಕುಟುಂಬ ಸಲುಹುದು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಿ ತಮ್ಮ ಜೀವನವನ್ನು …

Read More »

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಧಾರವಾಡದ ಒಂದೇ ಕುಟುಂಬದ 6 ಜನ ಮೃತ

ಧಾರವಾಡ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕಾಶೀಳ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಇಬ್ವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಎರಡೂವರೆ ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಬಾಲಕಿ ಮೃತಪಟ್ಟಿದ್ದು, ಇವರು ಧಾರವಾಡದ ನಿಜಾಮೋದಿನ ಸೌದಾಗರ ಎಂಬ ಕುಟುಂಬದವರು ಎನ್ನಲಾಗಿದೆ.ಚಾಲಕನ‌ ನಿಯಂತ್ರಣ ತಪ್ಪಿ …

Read More »

ಸಂಭ್ರಮ ಸಡಗರದ ತೋಟದಮ್ಮನವರ ವಿಶೇಷ ಪೂಜೆ.

ಮಂಡ್ಯ: ಜಿಲ್ಲೆಯಲ್ಲಿಂದು ತೋಟದಮ್ಮನವರ ಹಬ್ಬದ ಸಂಭ್ರಮ ಮನೆ ಮಾಡಿತು.ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ತೋಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳು ಮತ್ತು ಮಹಿಳೆಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ತೊಂಬಿಟ್ಟಿನಾರತಿಯ ಮಡೆಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರೆ, ಮಕ್ಕಳು ಮತ್ತು ಯುವಜನರು ತಮಟೆಯ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ನೃತ್ಯಮಾಡಿ ಸಂಭ್ರಮಿಸಿದರು…ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್, ಮುಖಂಡರಾದ ಬಾಲಕೃಷ್ಣ, ಉಮೇಶ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು… ತೋಟದಮ್ಮನವರ …

Read More »

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ

ಚಿಕ್ಕೋಡಿ: ದಿನೇ ದಿನೇ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ನದಿ ನೀರು 2 ಲಕ್ಷ ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ‌ ಇದರಿಂದ ಕೃಷ್ಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದನದಿ ತೀರದ ಜನರು ನದಿ ದಾಟಿ ಸುರಕ್ಷಿತ ಸ್ಥಳಕ್ಕೆ ಹೋಗುವ ವೇಳೆ ವ್ಯಕ್ತಿಯೊಬ್ಬ ಹಿನ್ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ …

Read More »

ಆನೇಕಲ್ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ್ ಅವಿರೋಧ ಆಯ್ಕೆ

ಆನೇಕಲ್: ಆನೇಕಲ್ ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ಮಾಡಿಲಾಗಿದ್ದು ನೂತನ ಅಧ್ಯಕ್ಷರಾಗಿ ಬಿ.ಟಿವಿ ವರದಿಗಾರರಾದ ಅಮರೇಶ್ ಅವಿರೋಧವಾಗಿ ಆಯ್ಕೆಯಾದರು, ಬೆಂಗಳೂರು ಹೊರವಲಯ ಆನೇಕಲ್ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ನಡೆದಿದ್ದು 27 ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಬಿ.ಟಿವಿ ವರದಿಗಾರ ಅಮರೇಶ್ ಅವರನ್ನು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು,ಇನ್ನು ಪ್ರಮುಖವಾಗಿ ಸಭೆಯಲ್ಲಿ ಪ್ರತಿನಿತ್ಯ ಹಗಲು ರಾತ್ರಿ ಎನ್ನದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕೆಲಸ …

Read More »

ಕೋಲಾರದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಿಂದ ಜನರಿಗೆ ಹಣ ವಂಚನೆ ಆರೋಪ. ಕೋರ್ಟಿನಲ್ಲಿ ಮುಂದುವರೆದ ವಿಚಾರಣೆ

ಕೋಲಾರ: ಬಂಗಾರಪೇಟೆ ಪಟ್ಟಣದ ಷಣ್ಮುಗ ಫೈನಾನ್ಸ್ ಹಾಗೂ ಚಿಟ್ ಫಂಡ್ ಖಾಸಗಿ ಕಂಪನಿಯಿಂದ ಸಾವಿರಾರು ಜನರಿಗೆ ಮೋಸ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಒಂದು ವರ್ಷದ ಹಿಂದೆಯೇ ಈ ಕಂಪನಿ ವಂಚನೆಯ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ‌ ಈ ಹಿನ್ನೆಲೆಯಲ್ಲಿ ಹೂಡಿಕೆಯ ಹಣ ವಾಪಸು ಕೊಡಿಸುವಂತೆ ಕೆಜಿಎಫ್ ಎಸ್ ಪಿ ಮೊಹಮ್ಮದ್ ಸುಜೀತ್ ಗೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಸೇರಿದಂತೆ ಸಾವಿರಾರು …

Read More »

ಆ. 3ರಂದು ಬಸವಜಯಂತಿ, ಬಸವಶ್ರೀ ಕಾಯಕಯೋಗಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ.

ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಗಷ್ಟ್ 3ರ ಶನಿವಾರ ಬೆಳಿಗ್ಗೆ 10ಗಂಟೆಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೆ.ಆರ್.ಪೇಟೆ ತಾಲ್ಲೂಕು ಘಟಕದ ವತಿಯಿಂದ ಬಸವಜಯಂತಿ, ಬಸವಶ್ರೀ ಕಾಯಕಯೋಗಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಬಸವಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರುಶಾಖಾ …

Read More »