Breaking News

admin

ಡೆಂಗ್ಯೂ ತಡೆಗೆ ಬೃಹತ್ ಆಂದೋಲನ

ಮಂಗಳೂರು: ಡೆಂಗ್ಯು ರೋಗ ನಿಯಂತ್ರಣ ಅಂಗವಾಗಿ ಇಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆಂದೋಲನ ನಡೆಯಿತು. ಡೆಂಗ್ಯು ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ ಈ. ಪ್ರದೇಶಗಳನ್ನು *ಗ್ರಿಡ್ 1* ಎಂದು ಪರಿಗಣಿಸಿ ವ್ಯವಸ್ಥಿತವಾಗಿ ಇಂದು ಈ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು.ಸುಮಾರು 250 ಕ್ಕೂ ಅಧಿಕ ಸಿಬ್ಬಂದಿಗಳು, ಸ್ವಯಂ ಸೇವಕರು, ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.ಈ ಪ್ರದೇಶಗಳ ಮನೆ, ಉದ್ದಿಮೆ, …

Read More »

ವಾಣಿಜ್ಯ ನಗರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಗೋಸಾಗಾಣಿಕೆ

ಹುಬ್ಬಳ್ಳಿ: ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮಗೋ ಸಾಗಾಣಿಕೆ. ಕಸಾಯಿಖಾನೆಗೆ ಗೋವುಗಳನ್ನುರಾಜಾರೋಷವಾಗಿ ಕೊಂಡೊಯ್ಯುಲಾಗುತ್ತಿದೆ.ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆಒಂದಿಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದರೂಕೂಡ ಕಡಿವಾಣ ಮರೀಚಿಕೆಯಾಗಿದೆ.ಹೌದು ಚೋಟಾ ಮುಂಬೈ ಖ್ಯಾತಿಯಹುಬ್ಬಳ್ಳಿಯಲ್ಲಿ ಇಂತಹ ಕಾನೂನು ಬಾಹಿರಕೃತ್ಯಗಳಿಗೆ ಕಡಿವಾಣವಿಲ್ಲದಾಗಿದೇ ಹಾಡಹಗಲೇಮಾರುಕಟ್ಟೆಯಿಂದ ಕಸಾಯಿಖಾನೆಗೆ ಗೋವುಗಳನ್ನುಕೊಂಡೊಯ್ಯುತ್ತಿದ್ದರೂ ಕೂಡ ಪೊಲೀಸ್ ಇಲಾಖೆಕಣ್ಣು ಮುಚ್ಚಿ ಕುಳಿತಿರುವುದು ಪೊಲೀಸ್ ಇಲಾಖೆಯವರ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹುಬ್ಬಳ್ಳಿಯ ಗೋಕುಲ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬೈಪಾಸ್ ಬಳಿ ಯಾವುದೇ ಭಯವಿಲ್ಲದೇ ರಾಜಾರೋಷವಾಗಿಅಕ್ರಮ ಗೋ ಸಾಗಾಣಿಕೆ ನಡೆಯುತ್ತಿದೆ.ಇದು …

Read More »

ತೊಟ್ಟಿಲು ತೂಗುವ ಕೈ ದೇಶವಾಳಲಿ

ಹುಬ್ಬಳ್ಳಿ: ತೊಟ್ಟಿಲನ್ನು ತೂಗುವ ಕೈ ದೇಶವನ್ನು ರಕ್ಷಿಸಬಲ್ಲದು ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ ತಿಳಿಸಿದರು. ನಗರದಲ್ಲಿಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ, ಮಹಿಳಾ ಸೇನಾ ಭರ್ತಿಯ ಪೂರ್ವತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,ಮನೆಯಲ್ಲಿನ ಎಲ್ಲ ಕಟ್ಟಳೆಗಳನ್ನು ಬದಿಗಿಟ್ಟು ಮಹಿಳೆಯರು ಸೈನ್ಯ ಸೇರಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದರು. ದೇಶದ ಮಹತ್ವ ಪೂರ್ಣ ಸೇವೆಯಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕೂಡ ಒಂದಾಗಿದೆ. ಇಲ್ಲಿ ಪುರುಷರು …

Read More »

ವಂಚಿತ 1 ಗುಂಟೆ ಆಸ್ತಿ ಜಪ್ತಿ

ಹುಬ್ಬಳ್ಳಿ: ಕಲಘಟಗಿಯ ಹರ್ಷಾ ಎಂಟರಟೇನಮೇಂಟ್ ವಂಚನೆ ಪ್ರಕರಣ ಹಿನ್ನೆಲೆ ಅಧಿಕಾರಿಗಳು ಹುಬ್ಬಳ್ಳಿಯ ಬೈರಿದೇವರಕೊಪ್ಪ ಬಳಿಯ 1 ಗುಂಟೆ 08 ಅಣೇ ಪ್ಲಾಟ್ ಜಪ್ತಿ ಮಾಡಿದ್ದಾರೆ.ಧಾರವಾಡ ಉಪ ವಿಭಾಗ ಅಧಿಕಾರಿ ಮಹ್ಮದ್ ಜುಬೇರ್ ಹಾಗೂ ತಹಶಿಲ್ದಾರರ ಶಶೀಧರ ಮಾಡ್ಯಾಳ ನೇತೃತ್ವದಲ್ಲಿ ಜಪ್ತಿ ಮಾಡಿದ್ದಾರೆ.ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಖಾಸನೀಸ್ ಸಹೋದರರಾದ ಸತ್ಯಭೋದ ಖಾಸ್ ನೀಸ್, ಸಂಜೀವ ಖಾಸನೀಸ್ ಹಾಗೂ ಶ್ರೀಕಾಂತ್ ಖಾಸ್ ನೀಸ್ ಸಹೋದರರು ವಂಚನೆ ಮಾಡಿದ್ದು, 2017 ರಲ್ಲಿ ವಂಚನೆ …

Read More »

ವೈಭವದಿಂದ ಜರುಗಿದ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಕರಗ ಮಹೋತ್ಸವ

ಮಂಡ್ಯ: ನೇಕಾರ ತೊಗಟವೀರ ಕುಲಬಾಂಧವರಿಂದ. ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಕರಗ ಮಹೋತ್ಸವಅದ್ದೂರಿಯಾಗಿ ನೆರವೇರಿತು.ಕರಗವು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ಮೂಲಕ ಭಕ್ತರ ಮನಸೂರೆಗೊಂಡಿತು.ಕುಲಬಾಂಧವರಿಂದ 9ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ಆಚರಿಸಲಾಯಿತು.ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ಬಾಲಕಿಯರ ತಲೆಯ ಮೇಲೆ ಹೊರಿಸಿ ನಡೆಮುಡಿಯ ಮೇಲೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯ ಮೂಲಕ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದ ಸ್ವಸ್ಥಾನಕ್ಕೆ …

Read More »

ಬತ್ತಿದ ಪುಷ್ಕರಣಿ ಸ್ವಚ್ಛತೆಗೆ ಮುಂದಾದ ನಗರಸಭೆ ಮತ್ತು ಜಿಲ್ಲಾಡಳಿತ.

ಚಿತ್ರದುರ್ಗ: ನಗರದ ಮಧ್ಯದಲ್ಲಿನ ಕೆಂಚಮಲ್ಲಪ್ಪನ ಬಾವಿಯನ್ನು ಸ್ವಯಂ ಸೇವಕ ಸಂಘದ ಜೊತೆಗೂಡಿ ಸ್ವಚ್ಚತೆಯನ್ನು ಮಾಡಲಾಯಿತು.ನಗರಸಭೆಯ ವತಿಯಿಂದ ನಡೆದ ಈ ಕೆಲಸಕ್ಕೆ ಶಾಲಾ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.ಕಳೆಯ ಕೊರತೆಯಿಂದ ಪುಷ್ಕರಣಿಯು ಬತ್ತಿದ್ದು, ಕಸ ತುಂಬಿಕೊಂಡು ದುರ್ವಾಸನೆ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಛತಾ ಕಾರ‍್ಯಾ ಮಾಡಲಾಗುತ್ತಿದೆ.

Read More »

ರಾಜ್ಯ ರಾಜಕೀಯ ಕುರಿತು ರೈತರಲ್ಲಿ ಬೇಸರವಾಗುತ್ತಿರುವುದನ್ನು ಬಿಚ್ಚಿಟ್ಟ ಯುವಕ

ಮಂಡ್ಯ: ರಾಜ್ಯದ ಜನ ನಿಮ್ಮನ್ನು ನೋಡುತಿದ್ದಾರೆ ಎನ್ನುವುದನ್ನು ಮರೆತಿದ್ದೀರಾ ದಯಮಾಡಿ ಒಳ್ಳೆ ಕೆಲಸಗಳನ್ನು ಮಾಡಿ ಎಂದು ಸಂತೇಬಾಚಳ್ಳಿ ಹೋಬಳಿ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.ಮಂಡ್ಯ ಜಿಲ್ಲೆಯ ಮಂಡ್ಯ ಸಂತೇಬಾಚಳ್ಳಿ ಹೋಬಳಿಯ ರೈತನ ಪುತ್ರನಾದ ಈ ಯುವಕಸರ್ಕಾರದಿಂದ ರೈತರಿಗೆ ನಯಾಪೈಸೆ ಉಪಯೋಗವಿಲ್ಲ ನಮ್ಮ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಎಂದು ಬೇಸರ ವೆಕ್ತಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿರೈತರಿಗೆ ಉಪಯೋಗವಾಗುವಂತೆ ಸರ್ಕಾರ ಕೆಲಸ ಮಾಡಲಿ ಎಂಬುದಾಗಿ …

Read More »

ಶ್ರೀಮಂತ ಪಾಟೀಲ್ ಭೇಟಿಗೆ ಯತ್ನಿಸಿದ ಮಹಾ ಕಾಂಗ್ರೆಸ್ ಶಾಸಕಿ ಯಶೋಮತಿ

ಚಿಕ್ಕೋಡಿ: ಕಲಾಪದಲ್ಲಿ ಭಾಗವಹಿಸದೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭೇಟಿಗೆ ಆಗಮಿಸಿದ ಕಾಂಗ್ರೆಸ್‌ ಶಾಸಕಿ ಯಶೋಮತಿ ಅವರನ್ನು ಪೋಲೀಸ್ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದೇ ತಡೆದಿದ್ದಾರೆ.ಈ ವೇಳೆ ಯಶೋಮತಿ ಅವರು ಪೋಲಿಸ್ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಎದೆನೋವು ಎಂಬ ಕಾರಣದಿಂದ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ಶಾಸಕ‌ ಶ್ರೀಮಂತ ಪಾಟೀಲ್ ದಾಖಲಾಗಿದ್ದಾರೆ. ಈ ವೇಳೆ ನಮ್ಮ ಎಂ ಎಲ್ …

Read More »

ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ

ಮಂಡ್ಯ: ಕೆ.ಆರ್.ಪೇಟೆ ಪಾಂಡುಪುರ ರೈತರ ಜೀವನಾಡಿಯಾಗಿ ಆತ್ಮೀಯ ಬಂಧುವಿನಂತೆ ಕೆಲಸ ಮಾಡುತ್ತಿರುವ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಯು ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ವಿಶೇಷ ಪೂಜೆ ಪುರಸ್ಕಾರ ಹಾಗೂ ಹೋಮಹವನವನ್ನು ನಡೆಸಿ ಅಧಿಕೃತವಾಗಿ ಚಾಲನೆ ನೀಡಿದರು…ಕಳೆದ ಸಾಲಿನಲ್ಲಿ ಏಳೂವರೆ ಲಕ್ಷ ಟನ್ ಕಬ್ಬು ಅರೆದು ಮಂಡ್ಯ ಜಿಲ್ಲೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಎಂಟು ಲಕ್ಷ …

Read More »

ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಪ್ರತಿಭಟನೆ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳೂರಲ್ಲಿ ಪಕ್ಷದ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ ಎಂಬಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗಲಭೆ ನಡೆದಿತ್ತು. ಈ ವೇಳೆ ಹತ್ಯೆಗೀಡಾದ ಹತ್ತು ಮಂದಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿ …

Read More »