Breaking News

admin

ವರುಣನ‌‌ ಆರ್ಭಟದಿಂದ ದತ್ತ ಮಂದಿರ ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ವರುಣ ದೇವನ‌ ಆರ್ಭಟ ಹೆಚ್ಚಾಗಿದ್ದು, ಮಳೆಯ ಅಬ್ಬರದಿಂದ ಮಹಾರಾಷ್ಟ್ರದ ಕೃಷ್ಣೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ‌ ಇದರ ಬೆನ್ನಲ್ಲೇ ಕಲ್ಲೋಳ ಗ್ರಾಮದ ಬಳಿ ಇರುವ ದತ್ತ ಮಂದಿರದ ಸುತ್ತಲೂ ನೀರು ತುಂಬಿಕೊಂಡಿದೆ. ಅಷ್ಟೇ ಅಲ್ಲದೇ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನ, ಯಕ್ಸಂಬಾ ಪಟ್ಟಣದ ಮುಲಾನಕಿ ಬಳಿ ದುಧಗಂಗಾ ನದಿ ಬಳಿ ಪೀರಸಾಬ ದರ್ಗಾ ಜಲಾವೃತ ಗೊಂಡಿದೆ.ಸಧ್ಯ ೧ಲಕ್ಷ ೫ ಸಾವಿರ ಕ್ಯೂಸೇಕ್ …

Read More »

ಮೈನಿಂಗ್ ಲಾರಿಗಳ ಶಾಶ್ವತವಾಗಿ ನಿಲ್ಲಿಸಲು ಪ್ರತಿಭಟನೆ.

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರಿನ ಮಾರ್ಗದಲ್ಲಿ, ಸಂಚರಿಸುವ ಅದಿರು ತುಂಬಿದ ಲಾರಿಗಳಿಂದ ಇಲ್ಲಿನ ಸಾರ್ವಜನಿಕರಿಗೆ, ಶಾಲಾಮಕ್ಕಳಿಗೆ, ತುಂಬಾ ತೊಂದರೆಯಾಗುತ್ತಿರುವ ಜೊತೆಗೆ, ರೈತರ ಬೆಳೆಗಳಿಗೆ ಧೂಳು ಕೂತು ಬೆಳೆಗಳು ಹಾನಿಯಾಗುತ್ತಿರುವ ಜೊತೆಗೆ, ಮೈನಿಂಗ್ ಕಂಪನಿಗಳು ಮಾಡುತ್ತಿರುವ ಅರಣ್ಯ ನಾಶಾದಿಂದ ಮಳೆಯೂ ಕೂಡ ಕಡಿಮೆಯಾಗಿದ್ದು, ಇಲ್ಲಿನ ಮೈನಿಂಗ್ ಕಂಪನಿಗಳ ವಿರುದ್ದ, ಈ ಭಾಗದ ಗ್ರಾಮಸ್ಥರು ಶನಿವಾರ ಹಿರೇಗುಂಟನೂರಿನ ಮುಖ್ಯ ಬಸ್ ನಿಲ್ದಾಣದ ಬಳಿ, ದಾವಣಗೆರೆ ಸಂಸದ GM ಸಿದ್ದೇಶ್ವರ್ ರವರ ಪತ್ನಿ ಗಾಯತ್ರಿ ರವರ …

Read More »

ಆಸ್ತಿ ಕರ ಬಾಕಿ ಹಿನ್ನೆಲೆ ವಾಣಿಜ್ಯ ಮಳಿಗೆ ಜಪ್ತಿ

ಧಾರವಾಡ : ಆಸ್ತಿ ಕರ ತುಂಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ 2ರ ಸಹಾಯಕ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿರುವ ವಾರ್ಡ್ ನಂಬರ್ 8ರಲ್ಲಿನ ವಾಣಿಜ್ಯ ಮಳಿಗೆಯೊಂದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಮೆಹಬೂಬಸಾಬ್ ಕಲಕೇರಿ ಎಂಬುವವರ ಮಳಿಗೆ ಜಪ್ತಿ ಮಾಡಿದ್ದಾರೆ.ಕಳೆದ 20 ವರ್ಷಗಳಿಂದ ಆಸ್ತಿಕರವನ್ನೇ ತುಂಬಿರಲಿಲ್ಲ ಹೀಗಾಗಿ ಇಲ್ಲಿಯವರೆಗೆ ಒಟ್ಟು 1.87 ಲಕ್ಷ ರೂಪಾಯಿ ಆಸ್ತಿ ಕರ ಬಾಕಿ ಉಳಿದಿತ್ತು ಎನ್ನಲಾಗಿದೆ.ಮೆಹಬೂಬಸಾಬ್ ಕಲಕೇರಿ ಎಂಬುವವರಿಗೆ ಆಸ್ತಿ ಕರ ತುಂಬುವಂತೆ ಹಲವು ನೋಟಿಸ್ …

Read More »

ಸುಗಮ್ಯ ಶಿಕ್ಷಣ ಭಾಗೀದಾರರ ಪರಿಚಯ ಕಾರ್ಯಕ್ರಮ

ಮಂಡ್ಯ: ಮಂಡ್ಯ ಪಟ್ಟಣದ ರಾಮದಾಸ್ ರೆಸ್ಟೋರೆಂಟ್ ಸುಲೋಚನಮ್ಮ ಸಭಾಂಗಣದಲ್ಲಿ ಗ್ರಾಮ್ ಸಂಸ್ಥೆಯು ಸುಗಮ್ಯ ಶಿಕ್ಷಣ ಭಾಗೀದಾರರ ಪರಿಚಯ ಕಾರ್ಯಕ್ರಮ ನಡೆಯಿತು…ಸುಗಮ್ಯ ಶಿಕ್ಷಾ ಗ್ರಾಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಲ್.ಬಸವರಾಜು ಮಾತನಾಡಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಗ್ರಾಮ್ ಸಂಸ್ಥೆಯ ಸುಗಮ್ಯಶಿಕ್ಷಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ …

Read More »

ತಾಯಿ ಹೇಳಿಕೆಯಿಂದ ಟ್ವಿಸ್ಟ್ ಪಡೆಯುತ್ತಿರುವ ಮಗು ಕಾಣೆಯಾದ ಪ್ರಕರಣ

ಉಡುಪಿ: ಕುಂದಾಪುರದ ಯಡಮೊಗ್ಗೆ‌ಯಲ್ಲಿ ನಡೆದ ಮಗು ಸಾವು ಪ್ರಕರಣ ಕ್ಕೆ ಸಂಬಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಆತ್ಮಹತ್ಯೆ ಯತ್ನ‌ ಪ್ರಕರಣ ದಾಖಲಿಸಲಾಗಿದೆ.ಯಡಮೊಗ್ಗೆ ಮಗು ಸಾವಿನ ಪ್ರಕರಣಕ್ಕೆ ಸಂಭಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಅತ್ಮಹತ್ಯೆ ಯತ್ನ ಪ್ರಕರಣಗಳು ಶಂಕರನಾರಯಣ ಠಾಣೆಯಲ್ಲಿ ದಾಖಲಾಗಿವೆ.ಮಾನಸಿಕ‌ ಖಿನ್ನತೆಯಿಂದ ಬಳಲುತ್ತಿದ್ದ ರೇಖಾ ತಮ್ಮಿಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಲು ನದಿಗಿಳಿದಿದ್ದು ,ಈ ಸಂಧರ್ಭದಲ್ಲಿ ಮಗು ಕೈಯಿಂದ ಜಾರಿ ಹೋಗಿತ್ತು , ನಂತರ …

Read More »

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ವಾಲ್ಮೀಕಿ ಶ್ರೀ

ದಾವಣಗೆರೆ: ಪರಿಶಿಷ್ಟ ಪಂಗಡ ಕ್ಕೆ ಈಗ ಇರುವ ಶೇ ೩.೫ ರಷ್ಟು ಮೀಸಲಾತಿಯನ್ನ ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇ.೭.೫ಕ್ಕೆ ಏರಿಸುವಂತೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು.ಸರ್ಕಾರ ಯಾವುದೇ ಇರಲಿ. ನಮ್ಮ ಬೇಡಿಕೆ ಎರಡು ತಿಂಗಳಲ್ಲಿ ಈಡೇರಬೇಕು.ವಿಳಂಬವಾದ್ರೆ ನಮ್ಮ ೧೫ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆಎಚ್ಚರಿಕೆ ನೀಡಿದರು.ಕಳೆದ ತಿಂಗಳು ಬೇಡಿಕೆ ಈಡೇರಿಕೆಗಾಗಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದರು. ಆ ವೇಳೆ ರಾಜ್ಯ ಸರ್ಕಾರಎರಡು …

Read More »

ಕುಡಿದ ಮತ್ತಲ್ಲಿ ಡ್ಯಾನ್ಸ್ ಮಾಡಿ ಜೀವ ಕಳೆದುಕೊಂಡ ಯುವಕ

ಹುಬ್ಬಳ್ಳಿ: ಕುಡಿದು ಡ್ಯಾನ್ಸ್ ಮಾಡಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡು ಘಟನೆಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ತೃಪ್ತಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ನಡೆದಿದೆ.ಅರುಣಕುಮಾರ ನವಲೆ (30) ಪ್ರಾಣ ಕಳೆದುಕೊಂಡ ಯುವಕ. ಪುಣೆಯ ಮೂಲದ ಯುವಕ, ಗೆಳೆಯರೊಂದಿಗೆ ಕೆಲಸದ ನಿಮಿತ್ಯ ಹುಬ್ಬಳ್ಳಿಗೆ ಬಂದಿದ್ದ. ರೂಮ್‌ನಲ್ಲಿ ಯುವಕರು ಕುಡಿದು, ಡ್ಯಾನ್ಸ್ ಮಾಡುತ್ತಿದ್ದರು.ಡ್ಯಾನ್ಸ್ ಮಾಡುವ ವೇಳೆ ರೂಮ್‌ನ ಕಿಡಕಿಯಿಂದ ಯುವಕ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾನೆ. ಹೋಟೆಲ್‌ನಲ್ಲಿ ನಾಲ್ಕನೇಯ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ …

Read More »

ಪ್ರಾಮಾಣಿಕತೆ ಮೆರೆದ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕಿ

ಧಾರವಾಡ : ಕೆಎಸ್‌ಆರ್‌ಟಿಸಿ ಬಸ್​ನ ನಿರ್ವಾಹಕಿಯೊಬ್ಬರು ಪ್ರಯಾಣಿಕರೊಬ್ಬರು ಬಿಟ್ಟು ಹೋದ ಮೊಬೈಲ್​​ನ ಅವರಿಗೆ ಹಿಂತಿರಿಗಿಸುವ ಮೂಲಕ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.ನಗರದಿಂದ ಎತ್ತಿನಗುಡ್ಡಕ್ಕೆ ಹೋಗುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಮಾಮ್ ಸಾಬ್ ಎಂಬ ಪ್ರಯಾಣಿಸುತ್ತಿದ್ದರು,ಈ ವೇಳೆ ಮೊಬೈಲ್ ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದರು, ಇದನ್ನು ಗಮನಿಸಿದ ನಿರ್ವಾಹಕಿ ರೂಪಕಲಾ‌ ಬಿ. ಇಮಾಮ್​ಸಾಬ್​ ಅವರು ಪ್ರಯಾಣಿಕರಿಗೆ ಕರೆ ಮಾಡಿ ಮೊಬೈಲ್​ನ ವಾಪಸ್‌ ನೀಡಿ ಪ್ರಮಾಣಿಕತೆ ಮೆರೆದಿದ್ದಾರೆ.ಈ ಕಾರ್ಯಕ್ಕೆ ಪ್ರಯಾಣಿಕರು, ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ಗದವರು …

Read More »

ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆದ ನಾರಾಯಣಸ್ವಾಮಿ

ಆನೇಕಲ್ : ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದ ಜೆಡಿಎಸ್ ನಾಯಕರುಗಳಿಗೆ ಬಿಜೆಪಿ ಕಡೆ ಬೊಟ್ಟು ಮಾಡೋದು ಸರಿಯಲ್ಲಬಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಚಿತ್ರದುರ್ಗ ಲೋಕಸಭಾ ಸದಸ್ಯ ನಾರಾಯಣಸ್ವಾಮಿ ಆಕ್ರೋಶವನ್ನು ಹೊರ ಹಾಕಿದ್ದಾರೆ.ಆನೇಕಲ್ ನ ಮಾಯಸಂದ್ರ ಗ್ರಾಮದ ಬಳಿ ಬಿಜೆಪಿ ಸಂಘಟನೆ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ಜನ ತಿರಸ್ಕಾರ ಮಾಡಿದಾಗಲೇ ರಾಜೀನಾಮೆ ನೀಡಬೇಕಿತ್ತು ಆದರೆ ನೈತಿಕತೆಯಿಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿ ಮಗನನ್ನು ಹೀನಾಯವಾಗಿ ಸೋಲಿಸಿದ ರಾಜ್ಯದ …

Read More »

5 ಲಕ್ಷ ಮೌಲ್ಯದ ಅಕ್ರಮ ಮರಳು ವಶ

ರಾಯಚೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡ ಮೇಲೆ ದಾಳಿ ನಡೆಸಿ ಪೋಲಿಸರು ೧೦೦೦ ಮೆಟ್ಟಿಕ್ ಟನ್ ಮರಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಪೋಲಿಸರು ಮಾನಶಯ್ಯ , ಶಿವು ನಿಲವಂಜಿ, ಭೀಮಪ್ಪ ಎಂಬುವವರನ್ನು ಬಂಧಿಸಿದ್ದಾರೆ. ‌ ದೇವದುರ್ಗ ತಾಲೂಕಿನ ಹೇರುಂಡಿ, ನಿಲವಂಜಿ ಗ್ರಾಮಗಳಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಒಟ್ಟು ಸುಮಾರು ೫ ಲಕ್ಷ ೧೦ ಸಾವಿರ ಬೆಲೆ …

Read More »